ಗ್ರಾಮೀಣ ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಐಎಎಸ್ ಅಧಿಕಾರಿಗಳಿದ್ದಾರಾ? ಪ್ರಧಾನಿ ಮೋದಿಗೆ ತುರ್ತಾಗಿ ಬೇಕಾಗಿದ್ದಾರೆ!

ನೀವು ಐಎಎಸ್ ಅಧಿಕಾರಿಗಳಾಗಿದ್ದುಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಬಗ್ಗೆ ಕಾಳಜಿಹೊಂದಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಅಂತಹ ಅಧಿಕಾರಿಗಳಿಗಾಗಿ ಹುಡುಕುತ್ತಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ನೀವು ಐಎಎಸ್ ಅಧಿಕಾರಿಗಳಾಗಿದ್ದು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಬಗ್ಗೆ ಕಾಳಜಿಹೊಂದಿದ್ದೀರಾ? ಹಾಗಾದರೆ ಪ್ರಧಾನಿ ಮೋದಿ ನಿಮಗಾಗಿ ಕಾಯುತ್ತಿದ್ದಾರೆ!
ಹೌದು, ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸೂಕ್ತ ಕಾರ್ಯದರ್ಶಿಗಾಗಿ ಪ್ರಧಾನಿ ನರೇಂದ್ರ ಮೋದಿ ಹುಡುಕುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜೆಕೆ ಮೋಹಪತ್ರ ಅವರ ನಿವೃತ್ತಿಯಿಂದಾಗಿ 2016 ರ ಜನವರಿಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆ ಖಾಲಿ ಇದ್ದು ಪಂಚಾಯತ್ ರಾಜ್ ಕಾರ್ಯದರ್ಶಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ   ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಇಲಾಖೆಗೆ ಸೂಕ್ತ ಕಾರ್ಯದರ್ಶಿಯ ನೇಮಕಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ಗ್ರಾಮೀಣಾಭಿವೃದ್ಧಿ ಬಗ್ಗೆ ಕಾಳಜಿ ಹೊಂದಿರುವ ಐಎಎಸ್ ಅಧಿಕಾರಿಗಳಿಗಾಗಿ ಎದುರುನೋಡುತ್ತಿದ್ದಾರೆ. 1984 -1985 ಕೇಡರ್ ನ ಹಲವು ಅಧಿಕಾರಿಗಳ ಹೆಸರುಗಳನ್ನು ಸೂಚಿಸಲಾಯಿತಾದರೂ, ಪ್ರಧಾನಿ ಕಾರ್ಯಾಲಯ ಯಾವ ಹೆಸರನ್ನೂ ಅಂತಿಮಗೊಳಿಸಲಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ, ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಸರ್ಕಾರದ ಚಾಲನಾ ಶಕ್ತಿಯನ್ನಾಗಿಸುವ ಸಾಮರ್ಥ್ಯ ಹೊಂದಿರುವವರನ್ನು ಪ್ರಧಾನಿ ನರೇಂದ್ರ ಮೋದಿ ಹುಡುಕುತ್ತಿದ್ದಾರೆ.
ಪ್ರಧಾನಿ ಕಾರ್ಯಾಲಯ, ಗ್ರಾಮೀಣಾಭಿವೃದ್ಧಿ, ನೀತಿ ಆಯೋಗ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ  ಪಿಪಿಪಿ ಮಾಡೆಲ್ ಸೇರಿದಂತೆ ಹಲವು ಯೋಜನೆಗಳಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೊಬೈಲ್ ಮೂಲಕ ನಗದು ವರ್ಗಾವಣೆ ಮಾಡುವ ಯೋಜನೆಯನ್ನು ಪರಿಚಯಿಸಸುವುದು ಸೇರಿದಂತೆ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ನವೀನ ಪರಿಕಲ್ಪನೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದ್ದರಿಂದ ಗ್ರಾಮೀಣ ಭಾಗಕ್ಕೆ ಗೇಮ್ ಚೇಂಜರ್ ನಂತಹ ವಿಶೇಷ ಸಾಮರ್ಥ್ಯವುಳ್ಳ ಅಧಿಕಾರಿಗಾಗಿ ಹುಡುಕಲಾಗುತ್ತಿದೆ ಎಂದು ಪಿಎಂಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com