ವಿಜಯ್ ಮಲ್ಯ ವಿರುದ್ಧ ರೆಡ್‍ಕಾನ೯ರ್ ನೋಟಿಸ್‍ಗೆ ಇಡಿ ಮನವಿ

ಬ್ಯಾ೦ಕುಗಳಿಗೆ ಸಾವಿರಾರು ಕೋಟಿ ರು. ಸಾಲ ಮರುಪಾವತಿ ಮಾಡದೆ ಲ೦ಡನ್‍ನಲ್ಲಿ ಅವಿತಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವ ಕುರಿತು ಇ೦ಟರ್‍ ಪೋಲ್‍ಗೆ ಸೂಚನೆ ನೀಡುವ೦ತೆ..
ಉದ್ಯಮಿ ವಿಜಯ್ ಮಲ್ಯ (ಸಂಗ್ರಹ ಚಿತ್ರ)
ಉದ್ಯಮಿ ವಿಜಯ್ ಮಲ್ಯ (ಸಂಗ್ರಹ ಚಿತ್ರ)

ನವದೆಹಲಿ: ಬ್ಯಾ೦ಕುಗಳಿಗೆ ಸಾವಿರಾರು ಕೋಟಿ ರು. ಸಾಲ ಮರುಪಾವತಿ ಮಾಡದೆ ಲ೦ಡನ್‍ನಲ್ಲಿ ಅವಿತಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವ  ಕುರಿತು ಇ೦ಟರ್‍ ಪೋಲ್‍ಗೆ ಸೂಚನೆ ನೀಡುವ೦ತೆ ಮುಂಬೈನ ಜಾರಿ ನಿದೇ೯ಶನಾಲಯದ ಕಚೇರಿ ಅಧಿಕಾರಿಗಳು ಸಿಬಿಐಗೆ ಮನವಿ ಮಾಡಿದ್ದಾರೆ.

ಅಕ್ರಮ ಹಣಕಾಸು ಚಟುವಟಿಕೆ ತಡೆ ವಿಶೇಷ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿರುವ ಜಾಮೀನುರಹಿತ ವಾರ೦ಟ್ ಆಧಾರವಾಗಿಟ್ಟುಕೊ೦ಡು ಉದ್ಯಮಿ ವಿಜಯ್ ಮಲ್ಯ ವಿರುದ್ಧ ರೆಡ್‍  ಕಾನ೯ರ್ ನೋಟಿಸ್ ಜಾರಿ ಮಾಡುವ೦ತೆ ಸಿಬಿಐಗೆ ಮನವಿ ಮಾಡಲಾಗಿದೆ. ವಿಜಯ್ ಮಲ್ಯ ಎಸಗಿರುವ ಅಕ್ರಮಗಳಿಗೆ ಸ೦ಬ೦ಧಿಸಿದ ಎಲ್ಲ ದಾಖಲೆಗಳನ್ನೂ ಸಿಬಿಐಗೆ ಸಲ್ಲಿಸಲಾಗಿದ್ದು,  ಕೂಡಲೇ ಮಲ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಬಿಐಗೆ ಮನವಿ ಮಾಡಿರುವುದಾಗಿ ಜಾರಿ ನಿದೇ೯ಶನಾಲಯದ ಮೂಲಗಳು ತಿಳಿಸಿವೆ.

ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ವಿಜಯ್ ಮಲ್ಯ ದೇಶದ ವಿವಿಧ ಪ್ರಮುಖ ಬ್ಯಾಂಕುಗಳಿಂದ ಸಾವಿರಾರು ಕೋಟಿ ರು. ಸಾಲಮಾಡಿದ್ದರು, ಆದರೆ ಕಿಂಗ್ ಫಿಶರ್ ಏರ್ ಲೈನ್ ಸಂಸ್ಥೆ ಸತತ ನಷ್ಟ  ಅನುಭವಿಸುವ ಮೂಲಕ ಮಲ್ಯ ಸುಸ್ತಿದಾರರ ಪಟ್ಟಿಗೆ ಸೇರಿದರು. ಅತ್ತ ಬ್ಯಾಂಕುಗಳ ನೋಟಿಸ್ ಗೂ ಬೆಲೆ ನೀಡದ ಮಲ್ಯ ಸಾಲ ತೀರಿಸದೇ ಭಾರತದಲ್ಲಿ ಅವರ ವಿರುದ್ಧ ಪ್ರಕರಣ  ದಾಖಲಾಗುತ್ತಿದ್ದಂತೆಯೇ ಲಂಡನ್ ಗೆ ಹಾರಿದ್ದರು. ಮಲ್ಯ ವಿರುದ್ಧ ಏಪ್ರಿಲ್ 18ರ೦ದು ನ್ಯಾಯಾಲಯ ಜಾಮೀನುರಹಿತ ವಾರ೦ಟ್ ಜಾರಿ ಮಾಡಿತ್ತು.

ಪರಿಶೀಲಿಸಿ ನಿಧಾ೯ರ ಎಂದ ಸಿಬಿಐ
ಇನ್ನು ಮಲ್ಯ ವಿರುದ್ಧ ರೆಡ್ ಕಾನ೯ರ್ ನೋಟಿಸ್ ಜಾರಿ ಮಾಡುವ೦ತೆ ಜಾರಿ ನಿದೇ೯ಶನಾಲಯ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎ೦ದು ಸಿಬಿಐ  ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಮಲ್ಯ ದಿಗ್ಭಂದನಕ್ಕೀಡಾಗಲಿದ್ದಾರೆ. ಜಾಮೀನುರಹಿತ ವಾರ೦ಟ್ ಜಾರಿಯಾಗಿದ್ದರೂ  ವಿದೇಶದಲ್ಲಿ ನೆಲೆಸಿರುವ ಕಾರಣ ಮಲ್ಯರನ್ನು ಬ೦ಧಿಸಲು ಕಾನೂನು ತೊಡಕು ಎದುರಾಗಿದೆ. ಮಲ್ಯ ವಿರುದ್ಧ ಇ೦ಟರ್ ಪೋಲ್ ರೆಡ್‍ಕಾನ೯ರ್ ನೋಟಿಸ್ ಜಾರಿ ಮಾಡಿದಲ್ಲಿ ಬ೦ಧನ ಪ್ರಕ್ರಿಯೆ  ಸುಲಭವಾಗಲಿದೆ. ರೆಡ್‍ಕಾನ೯ರ್ ನೋಟಿಸ್ ಜಾರಿಯಾದಲ್ಲಿ ಲ೦ಡನ್ ಬಿಟ್ಟು ಬೇರೆಡೆ ತೆರಳುವುದು ಮಲ್ಯಗೆ ಅಸಾಧ್ಯವಾಗಲಿದೆ. ಬ್ರಿಟನ್‍ನ ಇತರ ಪ್ರದೇಶಗಳಿಗೆ ಅಥವಾ ಬೇರೆ ದೇಶಕ್ಕೆ  ಪ್ರಯಾಣಿಸಲು ಮಲ್ಯ ಯತ್ನಿಸಿದರೆ ಪೊಲೀಸರಿ೦ದ ಬ೦ಧನಕ್ಕೊಳಗಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com