
ಚೆನ್ನೈ: ನೀವು ಒಂಟಿ ಮಹಿಳೆಯಾಗಿದ್ದರೇ ನಿಮಗೆ ಚೆನ್ನೈ ನಲ್ಲಿ ಮನೆ ಅಥವಾ ಫ್ಲ್ಯಾಟ್ ಸಿಗುವುದು ಕನಸಿನ ಮಾತಾಗಿದೆ. ಯಾಕಂದರೆ ಮಾಲೀಕರು ಒಂಟಿ ಮಹಿಳೆಗೆ ಅಥವಾ ಒಂಟಿ ಯುವತಿಯರಿಗೆ ಮನೆ ಬಾಡಿಗೆಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಒಂಟಿ ಮಹಿಳೆಯರಿಗೆ ಮನೆ ನೀಡಲು ನಿರಾಕರಿಸುತ್ತಿರುವದಕ್ಕೆ ಪ್ರಮುಖ ಕಾರಣ ಸೆಕ್ಯೂರಿಟಿ ಆಗಿದೆ. ದೆಹಲಿ ಮೂಲದ ಕೋಮಲ್ ಗಯಾಲ್ ಎಂಬುವರಿಗೆ ಚೆನ್ನೈ ನಲ್ಲಿ ಹೆಚ್. ಆರ್ ನೌಕರಿ ಸಿಕ್ಕಿತು. ಅವರು ಬಾಡಿಗೆಗಾಗಿ ಸುಮಾರು 7 ಫ್ಲ್ಯಾಟ್ ಗಳನ್ನು ಹುಡುಕಿದರು. ಆದರೆ ಅವರಿಗೆ ಎಲ್ಲೂ ಸರಿಯಾದ ಮನೆ ಮತ್ತು ಮಾಲೀಕರು ಸಿಗಲಿಲ್ಲ.
ಹೆಚ್ಚಿನ ಮನೆ ಮಾಲೀಕರುಗಳಿಗೆ ಒಂಟಿ ಮಹಿಳೆಯರು ಮತ್ತು ಅವಿವಾಹಿತರಿಗೆ ಮನೆ ಬಾಡಿಗೆ ನೀಡಲು ಇಷ್ಟವಿಲ್ಲ, ಯಾಕೆಂದರೆ ರಾತ್ರಿ 8 ಗಂಟೆಯ ಒಳಗೆ ಬಾಡಿಗೆದಾರರು ಮನೆ ಸೇರಲು ಮಾಲೀಕರು ಬಯಸುತ್ತಾರೆ ಎಂದು ಮನೆ ಹುಡುಕಿ ಹುಡುಕಿ ಸುಸ್ತಾದ ಕೋಮಲ್ ಗಯಾಲ್ ಅಭಿಪ್ರಾಯ.
ಇನ್ನೂ ಕೆಲವರು ವಿಶಾಲ ಮನೋಭಾವದ ಮನೆ ಮಾಲೀಕರು ಇರುತ್ತಾರೆ. ಮನೆಗೆ ಬರುವ ಸಮಯವನ್ನು ರಿಸ್ಟ್ರಿಕ್ಟ್ ಮಾಡುತ್ತಾರೆ. ಜೊತೆಗೆ ಯುವತಿಯರ ಬಾಯ್ ಫ್ರೆಂಡ್ ಮನೆ ಹತ್ತಿರ ಸುಳಿಯಲು ಬಿಡುವುದಿಲ್ಲ. ಜೊತೆಗೆ ಒಂಟಿ ಯುವತಿಯರು ಇರುವ ಮನೆಗೆ ಹೆಚ್ಚಿನ ಸೆಕ್ಯೂರಿಟಿ ಒದಗಿಸುತ್ತಾರೆ. ಹಾಗೂ ತಡರಾತ್ರಿ ಯುವತಿಯರ ಪೋಷಕರ ಕರೆಗಳನ್ನು ಅಟೆಂಡ್ ಮಾಡುತ್ತಾರೆ. ಆದರೆ ಇಂಥ ವಿಶಾಲ ಮನೋಭಾವದ ಮಾಲೀಕರು ಸಿಗುವುದು ಕಡಿಮೆ.
ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ ಎಂಬ ಕಲ್ಪನೆಯಿಂದ ಹಿಂದೆಲ್ಲಾ ಗಂಡಸರಿಗಿಂತ ಮಹಿಳೆಯರಿಗೆ ಮನೆ ಬಾಡಿಗೆ ಕೊಡುತ್ತಿದ್ದರು. ಜೊತೆಗೆ ಮಹಿಳೆಯರು ಇರುವ ಮನೆಯಲ್ಲಿ ಹೆಚ್ಚಿನ ಗಲಾಟೆ ಇರುವುದಿಲ್ಲ ಎಂದು ಭಾವಿಸಿದ್ದರು. ಆದರೆ ಅವರ ನಂಬಿಕೆ ಈಗ ಸುಳ್ಳಾಗಿದೆ.
ಈ ಹಿಂದೆ ಇಬ್ಬರು ಕಾಲೇಜು ಯುವತಿಯರಿಗೆ ಮನೆ ಬಾಡಿಗೆ ನೀಡಿದ್ದೆವು. ಅವರು ಮನೆಯನ್ನು ಎಷ್ಟು ಕೊಳಕು ಮಾಡುತ್ತಿದ್ದರೆಂದರೇ, ಮನೆ ಕೆಲಸದಾಕೆಯೇ ಕೆಲಸ ಬಿಟ್ಟು ಹೋದಳು, ಗಂಡ ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಾಗಿ ಮನೆಯನ್ನು ಗಲೀಜು ಮಾಡುತ್ತಾರೆ ಎಂಗದು ಬ್ರೋಕರ್ ಒಬ್ಬರು ಹೇಳಿದ್ದಾರೆ.
ಇನ್ನು ಮಹಿಳೆಯರಿಗೆ ಮನೆ ಬಾಡಿಗೆ ನೀಡಿದರೇ, ಯಾವಾಗಲು ಮನೆಯಲ್ಲಿ ಅದುಸ, ಇದು ಸಮಸ್ಯೆ ಎಂದು ಸದಾ ಕರೆ ಮಾಡಿ ದೂರು ಹೇಳುತ್ತಿರುತ್ತಾರೆ. ನಲ್ಲಿ ಮುರಿದಿದೆ. ಟ್ಯೂಬ್ ಲೈಟ್ ಹಾಳಾಗಿದೆ, ಎಂದು ಯಾವಾಗಲೂ ದೂರು ಹೇಳುತ್ತಿರುತ್ತಾರೆ. ಒಂದು ಸಣ್ಣ ಕೆಲಸವನ್ನು ಕೂಡ ಮಾಡಿಕೊಳ್ಳುವುದಿಲ್ಲ. ಆದರೆ ಗಂಡಸರು ಸಣ್ಣ ಪುಟ್ಟ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ ಮನೆ ಮಾಲೀಕ ಮದಂಬಕ್ಕಂ.
ಹೀಗಾಗಿ ಒಂಟಿ ಮಹಿಳೆಯರು ಮತ್ತು ಯುವತಿಯರಿಗೆ ಮನೆ ಬಾಡಿಗೆ ನೀಡಲು ಮನೆ ಮಾಲೀಕರು ಹಿಂಜರಿಯುತ್ತಿದ್ದಾರೆ. ಒಂದು ಉತ್ತಮ ಕಾಲೇಜಿನಲ್ಲಿ ಸೀಟು ಪಡೆದುಕೊಳ್ಳಬಹುದು, ಉತ್ತಮ ಕಂಪನಿಯಲ್ಲಿ ಕೆಲಸ ಪಡೆದುಕೊಳ್ಳಬಹುದು, ಆದರೆ ಚೆನ್ನೈನಲ್ಲಿ ಒಂಟಿ ಮಹಿಳೆ ಅಥವಾ ಯುವತಿಯರು ಮನೆ ಬಾಡಿಗೆಗೆ ಪಡೆದುಕೊಳ್ಳುವುದು ಕಷ್ಟದ ಕೆಲಸವಾಗಿದೆ.
Advertisement