ವಿಮೆ ಹಣ ಪಡೆದುಕೊಳ್ಳಲು ದರೋಡೆ ನಾಟಕ: ಚಿನ್ನಾಭರಣ ಮಾಲೀಕನ ಬಂಧನ

ವಿಮೆ ಹಣ ಪಡೆದುಕೊಳ್ಳಲು ಇಬ್ಬರು ಸಹೋದರರು ದರೋಡೆ ಕತೆ ಕಟ್ಟಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಚಂಡೀಗಡ: ವಿಮೆ ಹಣ ಪಡೆದುಕೊಳ್ಳಲು ಇಬ್ಬರು ಸಹೋದರರು ದರೋಡೆ ಕತೆ ಕಟ್ಟಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.

ಚಂಡೀಗಡದ ವಿನೋದ್ ವರ್ಮ ಮತ್ತು ರಜನೀಶ್ ವರ್ಮ ಎಂಬ ಸಹೋದರರು ಚಿನ್ನದ ಅಂಗಡಿ ನಡೆಸುತ್ತಿದ್ದರು. ಅವರು 10 ಕೋಟಿ ರೂಪಾಯಿ ವಿಮೆ ಹಣ ಮಾಡಿಸಿದ್ದು, 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವಾಗಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದರೋಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ್ದು, ಅನುಮಾನ ಬಂದವರನ್ನೆಲ್ಲಾ ವಿಚಾರಣೆಗೆ ಒಳಪಡಿಸಿದ್ದಾರೆ.

ಕೊನೆಗೆ ವ್ಯವಸ್ಥಾಪಕ ಅಜಯ್ ಎಂಬುವವನ ವಿಚಾರಣೆ ನಡೆಸಿದಾಗ, ವಿಮೆ ಹಣ ಪಡೆದುಕೊಳ್ಳಲು ವರ್ಮ ಸಹೋದರರು, 14 ಕೋಟಿ ಆಭರಣ ದರೋಡೆಯ ಕತೆ ಸೃಷ್ಠಿಸಿರುವುದು ತಿಳಿದು ಬಂದಿದೆ. ಪೊಲೀಸರು ವರ್ಮ ಸಹೋದರರಿಗೆ ಸೂಚನೆ ನೀಡಿದಾಗ ಒಬ್ಬ ತಪ್ಪೊಪ್ಪಕೊಂಡಿದ್ದಾನೆ.

ಒಬ್ಬ ತಲೆಮರೆಸಿಕೊಂಡಿದ್ದು,  ಮತ್ತೊಬ್ಬನನ್ನು ಬಂಧಿಸಿಲಾಗಿದೆ. ದರೋಡೆ ಪ್ರಕರಣ ಕೈಬಿಟ್ಟಿರುವ ಪೊಲೀಸರು ವರ್ಮ ಸಹೋದರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಎಫ್. ಐ ಆರ್ ರಿಜಿಸ್ಟರ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com