ಲಾತೂರ್ ಗೆ ನೀರು ಪೂರೈಸಿದ್ದಕ್ಕೆ 4 ಕೋಟಿ ಬಿಲ್ ಕಳಿಸಿದ ರೈಲ್ವೆ ಇಲಾಖೆ!

ಮಹಾರಾಷ್ಟ್ರದ ಬರಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಸಿದ್ದ ರೈಲ್ವೆ ಇಲಾಖೆ ಈಗ ಲಾತೂರ್ ನ ಜಿಲ್ಲಾಧಿಕಾರಿಗೆ 4 ಕೋಟಿ ಬಿಲ್ ಕಳಿಸಿದೆ.
ಲಾತೂರ್ ಗೆ ರೈಲು ಮೂಲಕ ನೀರು ಪೂರೈಕೆ
ಲಾತೂರ್ ಗೆ ರೈಲು ಮೂಲಕ ನೀರು ಪೂರೈಕೆ

ಮುಂಬೈ: ಮಹಾರಾಷ್ಟ್ರದ ಬರಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಸಿದ್ದ ರೈಲ್ವೆ ಇಲಾಖೆ ಈಗ ಲಾತೂರ್ ನ ಜಿಲ್ಲಾಧಿಕಾರಿಗೆ 4 ಕೋಟಿ ಬಿಲ್ ಕಳಿಸಿದೆ.

ನೀರಿಗಾಗಿ ಹಾಹಾಕಾರ ಉಂಟಾಗಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ರೈಲು ಮೂಲಕ ಲಾತೂರ್ ಗೆ  6 .20 ಕೋಟಿ ನೀರು ಪೂರೈಕೆ ಮಾಡಲಾಗಿತ್ತು. ಈಗ ಇದಕ್ಕೆ 4 ಕೋಟಿ ರೂಪಾಯಿ ಬಿಲ್ ಕಳಿಸಿಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ರೈಲ್ವೆಯ ವ್ಯವಸ್ಥಾಪಕ ಎಸ್ ಕೆ ಸೂದ್, ಆಡಳಿತ ವಿಭಾಗದ ಮನವಿಯ ಹಿನ್ನೆಲೆಯಲ್ಲಿ ಲಾತೂರ್ ನ ಜಿಲ್ಲಾಧಿಕಾರಿಗೆ ಬಿಲ್ ಕಳಿಸಿದ್ದೇವೆ. ಬಿಲ್ ಪಾವತಿ ಮಾಡುವುದು ಅಥವಾ ಅದನ್ನು ಮನ್ನಾಗೊಳಿಸುವಂತೆ ಮನವಿ ಮಾಡುವುದು ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟ ವಿಷಯ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ  50 ಬೋಗಿಗಳನ್ನೊಳಗೊಂಡ 2 ಗೂಡ್ಸ್ ರೈಲುಗಳ ಮೂಲಕ ಲಾತೂರ್ ಜಿಲ್ಲೆಗೆ ಏ.11 -12 ರಂದು ನೀರು ಪೂರೈಕೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com