ಗ್ರಾಮ ಪ್ರಧಾನ್‌ರ ಪತಿಯನ್ನು ಅವಮಾನಿಸಿದ ಬಿಜೆಪಿ ಸಂಸದೆ ಹೇಮ ಮಾಲಿನಿ

ಬನ್ಸಿಬಾತ್‌ಗೆ ಭೇಟಿ ನೀಡಿದ್ದ ವೇಳೆ ಹೇಮ ಮಾಲಿನಿ ತಮ್ಮನ್ನು ಬೈದು ಅವಮಾನಿಸಿರುವುದಾಗಿ ಗ್ರಾಮ್ ಪ್ರಧಾನ್ ಭಾಗ್ವತಿ ದೇವಿ ಅವರ ಪತಿ ಭಗ್ವಾನ್ ಸಿಂಗ್ ...
ಹೇಮಮಾಲಿನಿ
ಹೇಮಮಾಲಿನಿ
Updated on
ಮಥುರಾ: ಬಿಜೆಪಿ ಸಂಸದೆ ಹೇಮಮಾಲಿನಿ ತನ್ನನ್ನು ಅವಮಾನಿಸಿದ್ದಾರೆ ಎಂದು ಮಥುರಾ ಮಂಥ್‌ಮುಲಾ ಗ್ರಾಮ ಪ್ರಧಾನ್‌ರ ಪತಿ ಆರೋಪಿಸಿದ್ದಾರೆ.
ಬನ್ಸಿಬಾತ್‌ಗೆ ಭೇಟಿ ನೀಡಿದ್ದ ವೇಳೆ ಹೇಮ ಮಾಲಿನಿ ತಮ್ಮನ್ನು ಬೈದು ಅವಮಾನಿಸಿರುವುದಾಗಿ ಗ್ರಾಮ್  ಪ್ರಧಾನ್ ಭಾಗ್ವತಿ ದೇವಿ ಅವರ ಪತಿ ಭಗ್ವಾನ್ ಸಿಂಗ್ ಹೇಳಿದ್ದಾರೆ. ಅದೇ ವೇಳೆ ನಿಮ್ಮ ಪತ್ನಿ ಅದು ಹೇಗೆ  ಗ್ರಾಮ ಪ್ರಧಾನ್ ಆಗಿ ಆಯ್ಕೆಯಾದರು? ಎಂದು ಹೇಮ ಮಾಲಿನಿ ನನ್ನಲ್ಲಿ ಪ್ರಶ್ನಿಸಿದ್ದಾರೆ.
ಮರಗಳನ್ನು ಯಾಕೆ ಕಡಿಯುತ್ತಿದ್ದಾರೆ? ಎಂದು ಕೇಳಿದ್ದಕ್ಕೆ ತೆಹಸಿಲ್ ದಿವಸ್ ಪ್ರಯುಕ್ತ ಮರಗಳನ್ನು ಕಡಿಯುತ್ತಿದ್ದಾರೆ. ಈ ಬಗ್ಗೆ ನಾನು ದೂರನ್ನೂ ನೀಡಿದ್ದೇನೆ ಎಂದು ಉತ್ತರಿಸಿದಾಗ ಆಕೆ ನನ್ನನ್ನು ಬೈದು ಅವಮಾನಿಸಿದ್ದಾರೆ ಎಂದು  ಸಿಂಗ್ ಹೇಳಿದ್ದಾರೆ.
ಅವಮಾನದಿಂದ ಸಿಂಗ್ ಖಿನ್ನತೆ ಅನುಭವಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಸಿಂಗ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.
ಹೇಮಮಾನಿಯವರ ವಿರುದ್ಧ ಪ್ರಸ್ತುತ ಗ್ರಾಮದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ಆಕೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆದಾಗ್ಯೂ, ಪ್ರಸ್ತುತ ಪ್ರಕರಣದ ಬಗ್ಗೆ ಹೇಮಮಾಲಿನಿ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com