ಸೇನೆಯಲ್ಲಿ ದಂಗೆ ಕುರಿತು ವದಂತಿ: ವರದಿಯನ್ನು ನಿರಾಕರಿಸಿದ ಸೇನಾ ಅಧಿಕಾರಿಗಳು

ಭಾರತೀಯ ಸೇನೆಯಲ್ಲಿರುವ ಪದಾತಿದಳದ ಯೋಧರು ದಂಗೆ ಎದ್ದಿದ್ದಾರಾ? ಹೀಗೊಂದು ವದಂತಿ ಹಬ್ಬಿದೆ.
ಸೇನೆಯಲ್ಲಿ ದಂಗೆ ಕುರಿತು ವದಂತಿ: ವರದಿಯನ್ನು ನಿರಾಕರಿಸಿದ ಸೇನಾ ಅಧಿಕಾರಿಗಳು
ಸೇನೆಯಲ್ಲಿ ದಂಗೆ ಕುರಿತು ವದಂತಿ: ವರದಿಯನ್ನು ನಿರಾಕರಿಸಿದ ಸೇನಾ ಅಧಿಕಾರಿಗಳು

ನವದೆಹಲಿ: ಭಾರತೀಯ ಸೇನೆಯಲ್ಲಿರುವ ಪದಾತಿದಳದ ಯೋಧರು ದಂಗೆ ಎದ್ದಿದ್ದಾರಾ? ಹೀಗೊಂದು ವದಂತಿ ಹಬ್ಬಿದೆ. ಆದರೆ ಸೇನಾ ಅಧಿಕಾರಿಗಳು ಈ ಕುರಿತ ವರದಿಯನ್ನು ಸಾರ ಸಗಟಾಗಿ ತಿರಸ್ಕರಿಸಿದ್ದಾರೆ.

ಈಶಾನ್ಯ ಭಾಗದಲ್ಲಿ ಯೋಧನೊಬ್ಬನ ಸಾವಿನ ಪ್ರಕರಣದ ನಂತರ ಯೋಧರು ಪ್ರತಿಭಟನೆಯನ್ನು ಪ್ರಾರಂಭಿಸಿದ್ದು ಸೈನಿಕರು ಮತ್ತು ಅಧಿಕಾರಿಗಳ ನಡುವೆ ಮಾರಾಮಾರಿಯೂ ನಡೆದಿದೆ ಎಂಬ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಭಾವುಕರಾದ ಯೋಧರು ಮನನೊಂದು ಪ್ರತಿಭಟನೆ ನಡೆಸುತ್ತಿದ್ದಾರೆ ಇದು ದಂಗೆ ಅಲ್ಲ ಎಂದು ಹೇಳಿದ್ದಾರೆ.

ರೂಟ್ ಮಾರ್ಚ್ ನಡೆಯುವುದಕ್ಕೂ ಮುನ್ನ ಯೋಧರೊಬ್ಬರು ಎದೆ ನೋವು ಎದುರಿಸುತ್ತಿರುವುದರ ಬಗ್ಗೆ ಹೇಳಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದ ವೈದ್ಯರು  ಎದೆ ನೋವು ಎಂದು ಹೇಳಿದ್ದ ಯೋಧರ ಆರೋಗ್ಯ ಸರಿಯಾಗಿದ್ದು, ರೂಟ್ ಮಾರ್ಚ್ ಗೆ ಹೋಗಬಹುದು ಎಂದು ಹೇಳಿದ್ದರು. ಆದರೆ ತರಬೇತಿ ನಡುವೆಯೇ ಕುಸಿದು ಬಿದ್ದು ಆ ಯೋಧ ಸಾವನ್ನಪ್ಪಿದ್ದರು. ಈ ಪ್ರಕರಣದಿಂದ ಯೋಧರು ಮನನೊಂದಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು, ಯೋಧರ ನಡುವೆ ಸಣ್ಣ ಘರ್ಷಣೆ ನಡೆದಿದ್ದರೂ ಅದರಲ್ಲಿ ಯಾರೂ ತೀವ್ರವಾಗಿ ಗಾಯಗೊಂಡಿಲ್ಲ. ಯೋಧನ ಸಾವಿನ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com