ನವದೆಹಲಿ: ದೆಹಲಿಯ ವಸಂತ್‌ಕುಂಜ್‌ನಲ್ಲಿ ಯುವಕರ ಗುಂಪೊಂದು ಆಫ್ರಿಕಾ ಪ್ರಜೆಯನ್ನು ಹೊಡೆದು ಸಾಯಿಸಿದ ಘಟನೆ ಶುಕ್ರವಾರ ನಡೆದಿದೆ.
ಹತ್ಯೆಗೀಡಾದ ಆಫ್ರಿಕಾ ಪ್ರಜೆಯನ್ನು ಒಲಿವಾ (23) ಎಂದು ಗುರುತಿಸಿದ್ದು, ಈತ ಕೋಂಗೋದವನಾಗಿದ್ದಾನೆ. ವಸಂತ್‌ಕುಂಜ್‌ನ ಕೃಷ್ಣ ಕೆಲಸ ನಿಮಿತ್ತ ಆಗಮಸಿದ್ದ ಒಲಿವಾ, ನಾಲ್ಕೈದು ಜನರ ಜತೆ ಜಗಳವಾಡಿದ್ದಾನೆ.
ಈ ಜಗಳ ತಾರಕಕ್ಕೇರಿದ್ದು, ಜಗಳದಲ್ಲಿ ಯುವಕರ ಗುಂಪು ಒಲಿವಾಗೆ ಕಲ್ಲು ಹೊಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಒಲಿವಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆತನನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಒಲಿವಾ ಜತೆಗಿನ ಜಗಳಕ್ಕೆ ಕಾರಣವೇನು? ಮತ್ತು ಒಲಿವಾ ಸಾವಿಗೆ ಕಾರಣರಾದವರು ಯಾರು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.