ಕಾಂಗ್ರೆಸ್-ಬಿಜೆಪಿ ಸಂಬಂಧ ಸತಿ-ಪತಿ ಸಂಬಂಧವಿದ್ದಂತೆ: ಕೇಜ್ರಿವಾಲ್ ಟೀಕೆ

ಕಾಂಗ್ರೆಸ್ ಮತ್ತು ಬಿಜೆಪಿ ಸಂಬಂಧ ಸತಿ-ಪತಿ ಸಂಬಂಧವಿದ್ದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ...
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Updated on: 

ಪಣಜಿ: ಕಾಂಗ್ರೆಸ್ ಮತ್ತು ಬಿಜೆಪಿ ಸಂಬಂಧ ಸತಿ-ಪತಿ ಸಂಬಂಧವಿದ್ದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಸಂಬಂಧ ಪತಿ-ಪತ್ನಿ ಸಂಬಂಧವಿದ್ದಂತೆ. ಗಂಡ, ಹೆಂಡತಿಯರು ಮನೆಯೊಳಗೆ ಹೇಗೆ ಜಗಳವಾಡುತ್ತಾರೋ ಹಾಗೇ ಈ ಎರಡೂ ಪಕ್ಷದವರು ಜಗಳವಾಡುತ್ತಾರೆ ಎಂದು ಹೇಳಿದ್ದಾರೆ.

ಎರಡೂ ಪಕ್ಷದವರಿಗೂ ಅವರವರ ರಹಸ್ಯಗಳು ತಿಳಿದಿದೆ. ಕಾಂಗ್ರೆಸ್ ರಹಸ್ಯ ಬಿಜೆಪಿಗೆ ತಿಳಿದಿದ್ದರೆ, ಬಿಜೆಪಿಯವರಿಗೆ ಕಾಂಗ್ರೆಸ್ ನ ರಹಸ್ಯಗಳು ತಿಳಿದಿದೆ. ರಕ್ಷಣಾ ಸಚಿವರಾಗಿರುವ ಮನೋಹರ್ ಪರಿಕ್ಕರ್ ಅವರ ಬಳಿ ಕಾಂಗ್ರೆಸ್ ನಾಯಕರ ಕೆಲವು ರಹಸ್ಯ ಕಡತಗಳಿವೆ ಎಂದು ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನನ್ನ ಬಳಿ ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಎರಡೂ ಪಕ್ಷದ ನಾಯಕರು ಬುದ್ಧಿವಂತಿಕೆಯ ಆಟವಾಡುತ್ತಿದ್ದು, ಉತ್ತಮ ಸಂಬಂಧದಲ್ಲಿದ್ದಾರೆ. ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷವೂ ಜನರನ್ನು ಲೂಟಿ ಮಾಡುತ್ತಿದೆ. ಎರಡೂ ಪಕ್ಷಗಳು ಮಾಫಿಯಾದ ರಾಜವಾಗಿವೆ.

ಕೇವಲ ಟಿಕೆಟ್ ಗಾಗಿ ಪಕ್ಷಕ್ಕೆ ಬರುವವರಿಗೆ ನಮ್ಮ ಪಕ್ಷದಲ್ಲಿ ಎಂದಿಗೂ ಸ್ಥಾನವಿಲ್ಲ. ಟಿಕೆಟ್ ಗಾಗಿ ಪಕ್ಷಕ್ಕೆ ಬಂದವರು ನಮ್ಮ ನಿಯಮವನ್ನು ನೋಡಿ ಕೂಡಲೇ ಪಕ್ಷವನ್ನು ಬಿಟ್ಟು ಹೋಗುತ್ತಾರೆ. ಟಿಕೆಟ್ ಗಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಬೇಡಿ. ನಮ್ಮ ಪಕ್ಷದಲ್ಲಿ ಟಿಕೆಟ್ ಪಡೆದವರ ಮೇಲೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಪ್ರತೀಯೊಬ್ಬರಿಗೂ ಒಂದಲ್ಲ ಒಂದು ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಪಂಜಾಬ್ ನಲ್ಲಿ ಮಾದಕ ವ್ಯಸನ ದೊಡ್ಡ ಸಮಸ್ಯೆಯಾಗಿದೆ. ಪೊಲೀಸರೇ ನಿಮ್ಮ ಮನೆಯಲ್ಲಿ ಮಾದಕ ವ್ಯಸನವನ್ನಿರಿಸಿ ನಿಮ್ಮ ವಿರುದ್ಧ ಪ್ರಕರಣವನ್ನು ದಾಖಲಿಸುತ್ತಿದ್ದಾರೆ. ಇದರಿಂದ ಭಯ ಪಡಬೇಡಿ. ಇನ್ನು ಕೇವಲ 6 ತಿಂಗಳಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಸರ್ಕಾರ ರಚನೆ ಮಾಡಲಿದೆ. ನಕಲಿ ಪ್ರಕರಣಗಳನ್ನು ನಮ್ಮ ಪಕ್ಷ ತೆಗೆದುಹಾಕುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com