ಮಹಾತ್ಮಾಗಾಂಧಿ ಕ್ರಿಕೆಟ್ ಬಗ್ಗೆ ಏನು ಹೇಳ್ತಾರೆ ಎಂಬುದು ತ್ರಿಪುರಾದಲ್ಲಿ ಪಠ್ಯ ವಿಷಯ

ಪ್ರಸ್ತುತ ಪಠ್ಯ ಪುಸ್ತಕದಲ್ಲಿ ಭಾರತೀಯ ನಾಯಕರ ಬಗ್ಗೆ ಪಾಠವಿರುವುದು ಮಹಾತ್ಮಾ ಗಾಂಧಿ ಬಗ್ಗೆ ಮಾತ್ರ!. ಅದೂ ಹೇಗೆಂದರೆ ಭಾರತದ ಸ್ವಾತಂತ್ರ್ಯ....
ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ
Updated on: 
ನವದೆಹಲಿ:  ತ್ರಿಪುರಾದಲ್ಲಿನ ಎಡರಂಗ ಸರ್ಕಾರವು ಈಗಾಗಲೇ ಒಂಭತ್ತನೇ ತರಗತಿಯ ಸಾಮಾಜಿಕ ಅಧ್ಯಯನ ಪಠ್ಯ ಪುಸ್ತಕದಲ್ಲಿ ಭಾರತದ ಚರಿತ್ರೆ ಪಠ್ಯಭಾಗವನ್ನು ತೆಗೆದು ಹಾಕಿದೆ.
ಸುದ್ದಿ ಮಾಧ್ಯಮವೊಂದರ ಪ್ರಕಾರ, ಪ್ರಸ್ತುತ ಪಠ್ಯ ಪುಸ್ತಕದಲ್ಲಿ ಭಾರತೀಯ ನಾಯಕರ ಬಗ್ಗೆ ಪಾಠವಿರುವುದು ಮಹಾತ್ಮಾ ಗಾಂಧಿ ಬಗ್ಗೆ ಮಾತ್ರ!. ಅದೂ ಹೇಗೆಂದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಯಾವ ಪಾತ್ರ ವಹಿಸಿದರು ಎಂಬ ಬಗ್ಗೆಯಲ್ಲ, ಅದರ ಬದಲಾಗಿ ಕ್ರಿಕೆಟ್ ಬಗ್ಗೆ ಗಾಂಧಿ ನಿಲುವು ಏನಿತ್ತು ಎಂಬುದರ ಬಗ್ಗೆ!
ಕೊಲ್ಕತ್ತಾದ ಎಂಎಂಸಿ ಕಾಲೇಜಿನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದ ಕಲ್ಯಾಣ್  ಚೌಧರಿ ಅವರು ಈ ಪಠ್ಯಪುಸ್ತಕವನ್ನು ತಯಾರು ಮಾಡಿದ್ದಾರೆ.  ಈ ಪಠ್ಯ ಪುಸ್ತಕದಲ್ಲಿ ನಾಜಿಸಂ ಮತ್ತು ಅಡೋಲ್ಫ್ ಹಿಟ್ಲರ್‌ನ ಬಗ್ಗೆ ಮಾಹಿತಿ ಇದ್ದು, ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ನ ಆರಂಭದ ಬಗ್ಗೆಯೂ ಪಠ್ಯವಿದೆ.
ಆದಾಗ್ಯೂ, ಪುಸ್ತಕವನ್ನು ಇದೇ ರೀತಿ ರಚಿಸಬೇಕೆಂದು ಮಣಿಕ್ ಸರ್ಕಾರ್  ಸರ್ಕಾರ ನಮ್ಮ ಮೇಲೆ ಒತ್ತಡ ಹೇರಿದೆ ಎಂಬುದನ್ನು ತ್ರಿಪುರಾ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಷನ್ ನಿರಾಕರಿಸಿದೆ. ಅದೇ ವೇಳೆ ಎಡರಂಗ ಸರ್ಕಾರವು ಮಕ್ಕಳಿಗೆ ಮಾರ್ಕ್ಸ್ ಮತ್ತು ಕಮ್ಯುಮಿಸಂ ಕಲಿಸಿ ಅವರ ಬ್ರೈನ್ ವಾಶ್ ಮಾಡುತ್ತಿದೆ ಎಂದು ಬಿಜೆಪಿ ದೂರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com