80 ಸಾವಿರ ಖರ್ಚು ಮಾಡಿ ಒಂದು ಟನ್ ಈರುಳ್ಳಿ ಬೆಳೆದ ರೈತನಿಗೆ ಸಿಕ್ಕಿದ್ದು ಒಂದೇ ರೂಪಾಯಿ!

ಈರುಳ್ಳಿ ಬೆಲೆ ಕುಸಿತ ಕಾಣುತ್ತಿದ್ದು, ಬೆಳೆಗಾರರ ಸಂಕಷ್ಟಕ್ಕೆ ಕನ್ನಡಿ ಹಿಡಿಯುವಂತಹ ಘಟನೆ ಪುಣೆಯಲ್ಲಿ ನಡೆದಿದೆ.
80 ಸಾವಿರ ಖರ್ಚು ಮಾಡಿ ಒಂದು ಟನ್ ಈರುಳ್ಳಿ ಬೆಳೆದ ರೈತನಿಗೆ ಸಿಕ್ಕಿದ್ದು ಒಂದೇ ರೂಪಾಯಿ!
80 ಸಾವಿರ ಖರ್ಚು ಮಾಡಿ ಒಂದು ಟನ್ ಈರುಳ್ಳಿ ಬೆಳೆದ ರೈತನಿಗೆ ಸಿಕ್ಕಿದ್ದು ಒಂದೇ ರೂಪಾಯಿ!

ಪುಣೆ: ಈರುಳ್ಳಿ ಬೆಲೆ ಕುಸಿತ ಕಾಣುತ್ತಿದ್ದು, ಬೆಳೆಗಾರರ ಸಂಕಷ್ಟಕ್ಕೆ ಕನ್ನಡಿ ಹಿಡಿಯುವಂತಹ ಘಟನೆ ಪುಣೆಯಲ್ಲಿ ನಡೆದಿದೆ.
ಸುಮಾರು 80 ಸಾವಿರ ಖರ್ಚು ಮಾಡಿ ಎರಡು ಎಕರೆಯಷ್ಟು ಭೂಮಿಯಲ್ಲಿ ಬೆಳೆದಿದ್ದ ರೈತ ದೇವಿದಾಸ್ ಪರ್ಭನೆ ಅವರು ತಮ್ಮ ಬೆಳೆಯನ್ನು ಎಪಿಎಂಸಿಗೆ ಮಾರಾಟ ಮಾಡಿದಾಗ ಸಿಕ್ಕಿದ ಲಾಭ ಕೇವಲ ಒಂದು ರೂಪಾಯಿ! ದೇವಿದಾಸ್ ಪರ್ಭನೆ ಮೇ.10 ರಂದು 952 ಕೆಜಿಯಷ್ಟು ಈರುಳ್ಳಿಯನ್ನು ಮಾರಾಟ ಮಾಡಲು ಪುಣೆಯಲ್ಲಿರುವ ಎಪಿಎಂಸಿಗೆ ತೆಗೆದುಕೊಂಡು ಹೋಗಿದ್ದಾರೆ. ಪುಣೆ ಎಪಿಎಂಸಿ ಪ್ರತಿ 10 ಕೆಜಿಗೆ 16 ರೂಪಾಯಿಯಂತೆ ಈರುಳ್ಳಿಯನ್ನು ಖರೀದಿಸಿದೆ. ಅಂದರೆ ಪ್ರತಿ ಒಂದು ಕೆಜಿ ಈರುಳ್ಳಿಯ ಬೆಲೆ ಒಂದು ರೂಪಾಯಿ 60 ಪೈಸೆ.
952 ಕೆಜಿಯಷ್ಟು ಈರುಳ್ಳಿ ಮಾರಾಟ ಮಾಡಿದ್ದಕ್ಕೆ ಸಿಕ್ಕಿದ್ದು 1,523 ರೂಪಾಯಿಯಾದರೂ, ಮಧ್ಯವರ್ತಿಗಳಿಗೆ, ಕಾರ್ಮಿಕರಿಗೆ, ಟ್ರಕ್ ಗೆ ಹಣ ನೀಡಿದ ನಂತರ ದೇವಿದಾಸ್ ಪರ್ಭನೆ ಅವರ ಬಳಿ ಉಳಿದಿದ್ದು ಕೇವಲ ಒಂದು ರೂಪಾಯಿ ಮಾತ್ರ! ಎಲ್ಲವೂ ಕಳೆದು ಒಂದು ಟನ್ ಈರುಳ್ಳಿ ಮಾರಾಟ ಮಾಡಿದ ಹಣದಿಂದ ಒಂದು ರೂಪಾಯಿ ಮಾತ್ರ ಉಳಿದಿದ್ದು ಎಂದಿರುವ ದೇವಿದಾಸ್ ಪರ್ಭನೆ, ಇದೇ ರೀತಿಯಲ್ಲಿ ಅನೇಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅವರೆಲ್ಲರೂ ಈಗ ಆತ್ಮಹತ್ಯೆ ಹಾದಿ ಹಿಡಿದಿದ್ದು ತನಗೂ ಇದೇ ಸ್ಥಿತಿ ಎದುರಾದಲ್ಲಿ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com