ಬಿಸಿಲಿನ ಝಳ ತಾಳಲಾರದೆ ಮಾಲೀಕನನ್ನೇ ಕೊಂದ ಒಂಟೆ!

ಬಿಸಿಲಿನ ಝಳ ತಾಳಲಾರದೆ ಕೋಪಗೊಂಡ ಒಂಟೆಯೊಂದು ತನ್ನ ಮಾಲೀಕನನ್ನೇ ಕಚ್ಚಿ ಹತ್ಯೆ ಮಾಡಿರುವ ಘಟನೆಯೊಂದು ರಾಜಸ್ತಾನದ ಬಾರ್ಮರ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೋಧ್ಪುರ: ಬಿಸಿಲಿನ ಝಳ ತಾಳಲಾರದೆ ಕೋಪಗೊಂಡ ಒಂಟೆಯೊಂದು ತನ್ನ ಮಾಲೀಕನನ್ನೇ ಕಚ್ಚಿ ಹತ್ಯೆ ಮಾಡಿರುವ ಘಟನೆಯೊಂದು ರಾಜಸ್ತಾನದ ಬಾರ್ಮರ್ ಜಿಲ್ಲೆಯ ಮಾಂಗತ್ ಎಂಬ ಗ್ರಾಮದಲ್ಲಿ ಶನಿವಾರ ನಡೆದಿದೆ.

ರಾಜಸ್ತಾನದಲ್ಲಿ ತಾಪಮಾನ 50 ಡಿಗ್ರಿಯಿದ್ದು, ಬಿಸಿಲಿನ ತಾಪಮಾನಕ್ಕೆ ರಾಜಸ್ತಾನದ ಜನತೆಯಷ್ಟೇ ಅಲ್ಲದೆ ಇಲ್ಲಿನ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ.

ಮನೆಗೆ ಅತಿಥಿಗಳು ಬಂದ ಕಾರಣ ಮಾಲೀಕನೊಬ್ಬ ಒಂಟೆಯನ್ನು ಹೊರಗಡೆ ನಿಲ್ಲಿಸಿದ್ದಾನೆ. ಅತಿಥಿಗಳಿಗೆ ಸತ್ಕಾರ ಮಾಡುತ್ತಿದ್ದ ಕಾರಣ ಒಂಟೆಯನ್ನು ಹೊರಗೆ ಕಟ್ಟಿ ನಿಲ್ಲಿಸಿರುವುದನ್ನು ಮಾಲೀಕ ಮರೆತು ಹೋಗಿದ್ದಾನೆ. ಒಂಟೆ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲಿನಲ್ಲಿಯೇ ನಿಂತಿದೆ. ಸಂಜೆಯಾಗುತ್ತದ್ದಂತೆ ಮಾಲೀಕನಿಗೆ ಒಂಟೆಯ ನೆನಪಾಗಿದೆ.

ಕೂಡಲೇ ಕಟ್ಟಿ ಹಾಕಿದ್ದ ಒಂಟೆಯನ್ನು ಬಿಡಸಲು ಹೋಗಿದ್ದಾನೆ. ಈ ವೇಳೆ ಬಿಸಿಲಿನ ಝಳದಿಂದ ಕಂಗೆಟ್ಟು ತೀವ್ರ ಕೋಪಗೊಂಡಿದ್ದ ಒಂಟೆ ಮಾಲೀಕನ ಕುತ್ತಿಗೆಯನ್ನು ತನ್ನ ಹಲ್ಲಿನಿಂದ ಕಚ್ಚಿದೆ, ಅಲ್ಲದೆ, ಮೇಲಿನಿಂದ ಕೆಳಗೆ ಎಸೆದಿದೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಾಲೀಕ ಸಾವನ್ನಪ್ಪಿದ್ದಾನೆಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

ಒಂಟೆ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲಿನಲ್ಲಿ ನಿಂತಿತ್ತು. ಸಂಜೆ ವೇಳೆ ಮಾಲೀಕ ಒಂಟೆಯನ್ನು ಬಿಡಸಲು ಹೋಗಿದ್ದ ಈ ವೇಳೆ ಒಂಟೆ ಆತನ ತಲೆಯನ್ನು ಕಚ್ಚಿ ಹಿಡಿದು ಮೇಲಿನಿಂದ ಕೆಳಗೆ ಹಾಕಿತು. ಅಲ್ಲದೆ ಮನಬಂದಂತೆ ಆತನನ್ನು ತುಳಿದು ಸಾಯುವಂತೆ ಮಾಡಿತು. ಮತ್ತೆ ಒಂಟೆಯನ್ನು ನಿಂಯತ್ರಣಕ್ಕೆ ತರಲು ಸಾಕಷ್ಟು ಹರಸಾಹಸ ಪಡಲಾಯಿತು. ಈ ಹಿಂದೆಯೂ ಈ ಒಂಟೆ ಮಾಲೀಕನ ಮೇಲೆ ಹಲ್ಲೆ ಮಾಡಿತ್ತು.ಎಂದು ಸ್ಥಳೀಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com