
ನವದೆಹಲಿ: ಹಿಂದುಸ್ತಾನ್ ಪತ್ರಿಕೆಯ ಹಿರಿಯ ಪತ್ರಕರ್ತ ರಾಜದೇವ್ ರಂಜನ್ ಅವರ ಹತ್ಯೆ ಪ್ರಕರಣ ಮಹತ್ತರ ಪ್ರಗತಿಯನ್ನು ಪಡೆದುಕೊಂಡಿದ್ದು, ಬಿಹಾರ ಪೊಲೀಸರು ಬುಧವಾರ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಪ್ರಸ್ತುತ ಬಂಧನಕ್ಕೊಳಗಾಗಿರುವ ಐವರೂ ಆರೋಪಿಗಳು ಶೂಟರ್ ಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
43 ವರ್ಷದ ರಾಜದೇವ್ ರಂಜನ್ ಅವರನ್ನು ಮೇ.13ರಂದು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಸಿವಾನ್ ನ ಹತ್ತಿರುವಿರುವ ಹಣ್ಣಿನ ಮಾರುಕಟ್ಟೆ ಬಳಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪತ್ರಕರ್ತನ ಕೊಲೆ ಸಾಕಷ್ಟು ನೋವುಂಟು ಮಾಡಿದೆ. ಪ್ರಕರಣ ಕುರಿತು ಆಳವಾದ ತನಿಖೆ ನಡೆಸಿ ಕೊಲೆಗಾರರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಈ ಭರವಸೆ ನೀಡಿದ್ದರು. ಇದರಂತೆ ಇದೀಗ ಬಿಹಾರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Advertisement