ಗಾಂಧಿ ಹತ್ಯೆಯ ಮರುತನಿಖೆಗೆ ಆಯೋಗ ನೇಮಿಸುವುದಕ್ಕೆ ಆಗ್ರಹಿಸಿ ಪಿಐಎಲ್

1948 ರ ಜನವರಿಯಲ್ಲಿ ನಡೆದಿದ್ದ ಮಹಾತ್ಮಾ ಗಾಂಧಿ ಅವರ ಹತ್ಯೆ ಪ್ರಕರಣದ ಬಗ್ಗೆ ಮರು ತನಿಖೆ ಮಾಡಲು ಆಯೋಗವೊಂದನ್ನು ನೇಮಿಸಬೇಕು ಎಂದು ಆಗ್ರಹಿಸಿ ಬಾಂಬೆ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ.
ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ

ಮುಂಬೈ: 1948 ರ ಜನವರಿಯಲ್ಲಿ ನಡೆದಿದ್ದ ಮಹಾತ್ಮಾ ಗಾಂಧಿ ಅವರ ಹತ್ಯೆ ಪ್ರಕರಣದ ಬಗ್ಗೆ ಮರು ತನಿಖೆ ಮಾಡಲು ಆಯೋಗವೊಂದನ್ನು ನೇಮಿಸಬೇಕು ಎಂದು ಆಗ್ರಹಿಸಿ ಬಾಂಬೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಗಾಂಧಿ ಹತ್ಯೆ ಹಾಗೂ ಅದರ ಹಿಂದಿನ ಷಡ್ಯಂತ್ರದ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗವನ್ನು ನೇಮಿಸಬೇಕು ಎಂದು ಒತ್ತಾಯಿಸಿ ಅಭಿನವ ಭಾರತ ಸಂಘಟನೆಯ ಟ್ರಸ್ಟೀ ಹಾಗೂ ಸಂಶೋಧಕ ಡಾ. ಪಂಕಜ್ ಫಡ್ನೀಸ್ ಪಿಐಎಲ್ ದಾಖಲಿಸಿದ್ದು ಈ ಹಿಂದಿನ ಜೆಎಲ್ ಕಪೂರ್ ಆಯೋಗಕ್ಕೆ ಗಾಂಧಿ ಹತ್ಯೆಯ ಹಿಂದಿದ್ದ ಷಡ್ಯಂತ್ರಗಳನ್ನು ಬಹಿರಂಗಪಡಿಸಲು ಪೂರ್ಣವಾಗಿ ಸಾಧ್ಯವಾಗಿಲ್ಲ ಎಂದಿದ್ದಾರೆ.    
ಗಾಂಧಿ ಹತ್ಯೆಗೆ ಬಳಸಲಾಗಿದ್ದ ರಿವಾಲ್ವರ್ ಏಳು ಗುಂಡುಗಳನ್ನಿಡುವಷ್ಟು ಸಾಮರ್ಥ್ಯ ಹೊಂದಿತ್ತು. ಈ ಪೈಕಿ ಗಾಂಧಿ ಅವರಿಗೆ ಮೂರು ಗುಂಡುಗಳು ತಗುಲಿದ್ದರೆ ರಿವಾಲ್ವರ್ ಒಳಗಿದ್ದ ಇನ್ನು 4 ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ವಾಸ್ತವದಲ್ಲಿ ನಾಲ್ಕು ಗುಂಡುಗಳು ಗಾಂಧಿ ಅವರ ದೇಹವನ್ನು ಹೊಕ್ಕಿದೆ ಎಂದು ವಾದಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಕ್ಲಿಪ್ಪಿಂಗ್ ಗಳನ್ನು ಕೋರ್ಟ್ ಎದುರು ಹಾಜರುಪಡಿಸಿದ್ದು ಪಿಐಎಲ್ ವಿಚಾರಣೆ ಜೂ.6 ರಂದು ನಡೆಯಲಿದೆ, ನಾಥೂರಾಮ್ ಗೋಡ್ಸೆ ಹೊರತಾಗಿಯೂ ಗಾಂಧಿ ಅವರ ಮೇಲೆ ಯಾರಾದರು ದಾಳಿ ನಡೆಸಿದ್ದರೆ ಎಂಬುದನ್ನು ಬಹಿರಂಗಪಡಿಸಲು ತನಿಖಾ ಆಯೋಗವನ್ನು ನೇಮಿಸಬೇಕು ಎಂದು ಪಿಐಎಲ್ ನಲ್ಲಿ ಮನವಿ ಮಾಡಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com