ನಾವು ಮೋದಿ ಸರ್ಕಾರಕ್ಕೆ ವಿರೋಧವಾದಿಗಳಲ್ಲ, ವಾಸ್ತವವಾದಿಗಳು: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಡ್ಡಗಾಲು ಹಾಕುತ್ತಿರುವ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದ್ದು, ವಾಸ್ತವಾಂಶವನ್ನು ಹೇಳುತ್ತಿದ್ದೆವೆಯೇ ಹೊರತು ಅಡ್ಡಗಾಲು ಹಾಕುತ್ತಿಲ್ಲ ಎಂದು ಹೇಳಿದೆ.
ಆನಂದ್ ಶರ್ಮ
ಆನಂದ್ ಶರ್ಮ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಡ್ಡಗಾಲು ಹಾಕುತ್ತಿರುವ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದ್ದು, ವಾಸ್ತವಾಂಶವನ್ನು ಹೇಳುತ್ತಿದ್ದೆವೆಯೇ ಹೊರತು ಅಡ್ಡಗಾಲು ಹಾಕುತ್ತಿಲ್ಲ ಎಂದು ಹೇಳಿದೆ.
ಮೋದಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮ, ಕಾಂಗ್ರೆಸ್ ಅಡ್ಡಾಗಾಲು ಹಾಕುವ ರಾಜಕೀಯ ಮಾಡುತ್ತಿಲ್ಲ. ಆದರೆ ಮೋದಿ ಸರ್ಕಾರಕ್ಕೆ ವಾಸ್ತವವನ್ನು ತಿಳಿಸಲು ಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸರ್ಕಾರದ ಎರಡು ವರ್ಷಾಚರಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು ಕಳೆದ 15 ದಿನಗಳಿಂದ ವಿಕಾಸವಾದ ಹಾಗೂ ವಿರೋಧವಾದದ ಬಗ್ಗೆ ಚರ್ಚೆ ನಡೆಯುತ್ತಿದೆ, ಕಾಂಗ್ರೆಸ್ ವಿರೋಧವಾದಿಯೋ ಅಥವಾ ವಾಸ್ತವವಾದಿಯೋ ಎಂಬುದನ್ನು ಜನರೇ ತೀರ್ಮಾನಿಸಲಿ ಎಂದು ಹೇಳಿದ್ದಾರೆ. ಸರ್ಕಾರದ 2 ವರ್ಷಾಚರಣೆಯ ಸಮಾರಂಭದಲ್ಲಿ ಪ್ರಧಾನಿ ಮೋದಿ, ತಾವು ಎಲ್ಲಾ ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ಅದು ಸುಳ್ಳು ಎಂಬುದು ಅಂಕಿ-ಅಂಶಗಳ ಮೂಲಕ ಬಹಿರಂಗವಾಗಿದೆ, ಮೋದಿ ಹೇಳುವುದಕ್ಕೂ ಮಾಡಿರುವುದಕ್ಕೂ ಬಹಳಷ್ಟು ಅಂತರವಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com