12 ಬುಡಕಟ್ಟು ಬಾಲಕಿಯರ ಮೇಲೆ ಶಿಕ್ಷಕರಿಂದ ನಿರಂತರ ಅತ್ಯಾಚಾರ: ಮೂವರು ಗರ್ಭಿಣಿಯರು

12 ಬುಡಕಟ್ಟು ಅಪ್ರಾಪ್ತ ಬಾಲಕಿಯರ ಮೇಲೆ ಶಾಲಾ ಶಿಕ್ಷಕರೇ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ಬುಲ್‌ದಾಣಾದಲ್ಲಿ ಬೆಳಕಿಗೆ ಬಂದಿದೆ...
ಅತ್ಯಾಚಾರ
ಅತ್ಯಾಚಾರ
Updated on: 

ಬುಲ್‌ದಾಣಾ: 12 ಬುಡಕಟ್ಟು ಅಪ್ರಾಪ್ತ ಬಾಲಕಿಯರ ಮೇಲೆ ಶಾಲಾ ಶಿಕ್ಷಕರೇ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ಬುಲ್‌ದಾಣಾದಲ್ಲಿ ಬೆಳಕಿಗೆ ಬಂದಿದೆ.

ಬುಡಕಟ್ಟು ಜನಾಂಗದ ಮಕ್ಕಳಿಗಾಗಿರುವ ವಸತಿ ಶಾಲೆ ಹಿವರ್ಖೆಡಾದ ನಿನಬೌ ಪೊಕ್ರೆ ಆಶ್ರಮದ ಶಾಲೆಯಲ್ಲಿ ಶಿಕ್ಷಕರೇ ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು ಇದರಲ್ಲಿ ಮೂವರು ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಈ ದುಷ್ಕೃತ್ಯದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಭಾಗಿಯಾಗಿದ್ದಾರೆ. ಈ ಸಂಬಂಧ ಏಳು ಶಿಕ್ಷಕರು ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆದಿದೆ.

ದೀಪಾವಳಿ ಹಬ್ಬಕ್ಕೆಂದು ಮೂವರು ಬಾಲಕಿಯರು ಹೋಗಿದ್ದಾರೆ. ಮನೆಗೆ ಬಂದಿದ್ದ ಮಕ್ಕಳು ಮಂಕಾಗಿರುವುದನ್ನು ಗಮನಿಸಿದ ಪೋಷಕರು ಕಾರಣ ಕೇಳಿದಾಗ, ಹೊಟ್ಟೆ ನೋವು, ಹೊಟ್ಟೆ ಭಾರ ಎನಿಸುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದಾಗ ಈ ಮಕ್ಕಳು ಗರ್ಭ ಧರಿಸಿರುವುದಾಗಿ ಗೊತ್ತಾಗಿದೆ. ನಂತರ ಎಲ್ಲ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com