ಪಿಎಲ್ಎ ಸಿಬ್ಬಂದಿಗಳು ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿದ್ದ ವರದಿ ತಳ್ಳಿಹಾಕಿದ ಚೀನಾ

ಲಡಾಕ್ ಪ್ರಾಂತ್ಯದ ಡೆಮ್ ಚೋಕ್ ನಲ್ಲಿ ಭಾರತ ಸರ್ಕಾರದಿಂದ ನಡೆಸಲಾಗುತ್ತಿದ್ದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಚೀನಾ ಸೇನೆ ತಡೆಗಟ್ಟಿದೆ ಎಂಬ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ
ಪಿಎಲ್ಎ ಸಿಬ್ಬಂದಿಗಳು ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿದ್ದ ವರದಿ ತಳ್ಳಿಹಾಕಿದ ಚೀನಾ
ಪಿಎಲ್ಎ ಸಿಬ್ಬಂದಿಗಳು ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿದ್ದ ವರದಿ ತಳ್ಳಿಹಾಕಿದ ಚೀನಾ
ಬೀಜಿಂಗ್: ಲಡಾಕ್ ಪ್ರಾಂತ್ಯದ ಡೆಮ್ ಚೋಕ್ ನಲ್ಲಿ ಭಾರತ ಸರ್ಕಾರದಿಂದ ನಡೆಸಲಾಗುತ್ತಿದ್ದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಚೀನಾ ಸೇನೆ ತಡೆಗಟ್ಟಿದೆ ಎಂಬ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ತನ್ನ ಸೇನಾ ಸಿಬ್ಬಂದಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಯನ್ನು ದಾಟಿಲ್ಲ ಎಂದು ಸ್ಪಷ್ಟನೆ ನೀಡಿದೆ. 
ಚೀನಾ ಸಿಬ್ಬಂದಿ ಚೀನಾ ಪ್ರದೇಶದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಚೀನಾ- ಭಾರತದ ನಡುವೆ ಗಡಿ ವಿವಾದ ಇದೆಯಾದರೂ, ಉಭಯ ರಾಷ್ಟ್ರಗಳು ಗಡಿ ಪ್ರದೇಶದಲ್ಲಿ ಸ್ಥಿರತೆ ಶಾಂತಿ ಕಾಪಾಡಲು ಒಪ್ಪಂದ ಮಾಡಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 
ಲಡಾನ್ ನ ಡೆಮ್ ಚೋಕ್ ಪ್ರದೇಶಕ್ಕೆ ಪ್ರವೇಶ ಮಾಡಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಭಾರತ ಸರ್ಕಾರದಿಂದ ನಡೆಯುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ತಡೆಗಟ್ಟಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಭಾರತ ಸರ್ಕಾರ ಟಿಬೆಟ್ ನ ಬೌದ್ಧ ಧರ್ಮ ಗುರುಗಳಾದ ದಲೈ ಲಾಮಾ ಅವರಿಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿರುವ ಕಾರಣದಿಂದ ಭಾರತಕ್ಕೆ ತಿರುಗೇಟು ನೀಡಲು ಚೀನಾ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ಡೆಮ್ ಚೋಕ್ ಪ್ರದೇಶಕ್ಕೆ ನುಗ್ಗಿದೆ ಎಂದೂ ವಿಶ್ಲೇಷಿಸಲಾಗಿತ್ತು. ಆದರೆ ಚೀನಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಚೀನಾ ಸೇನೆಯ ಸಿಬ್ಬಂದಿಗಳು ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ದಾಟಿಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com