ಶಿವಪುರಿ: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಂಧಿಸಿದ ಪೊಲೀಸರು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಮನನೊಂದು ಶಿಕ್ಷಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜುಜಾಟ ಆರೋಪ ಸಂಬಂಧ ಸಜಾಪುರ್ ಪ್ರಾಥಮಿಕ ಶಾಲೆಯ ಶಿಕ್ಷಕ ಮನೋಜ್ ಪುರೋಹಿತ್ ನನ್ನು ಬಂಧಿಸಿ ಠಾಣೆಗೆ ಕರೆದ್ಯೊಯ್ದು ಅನುಚಿತವಾಗಿ ವರ್ತಿಸಿದ ಪೊಲೀಸರು ಆತನ ನಾಲಿಗೆಯಿಂದ ತಮ್ಮ ಶೂಗಳನ್ನು ನೆಕ್ಕಿಸಿ, ವಿವಸ್ತ್ರಗೊಳಿಸಿ ಚನ್ನಾಗಿ ಥಳಿಸಿದ್ದರು. ಇದರಿಂದ ಮನನೊಂದು ಪುರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜೈಲಿನಿಂದ ಹೊರ ಬಂದ ಶಿಕ್ಷಕ ಮನನೊಂದು ಅಕ್ಟೋಬರ್ 30 ರಂದು ವಿಷ ಕುಡಿದಿದ್ದರು. ಕೂಡಲೇ ಅವರನ್ನು ಝಾನ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಗುರುವಾರ ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ತನ್ನ ಸಾವಿಗೆ ಐವರು ಪೊಲೀಸರು ಹಾಗೂ ಪತ್ರಕರ್ತನೊರ್ವ ಕಾರಣ ಎಂದು ಹೇಳಿದ್ದಾನೆ.