ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಭಾರತ ಹೈ ಕಮಿಷನರ್ ಗೆ ಸುಷ್ಮಾ ಸ್ವರಾಜ್ ಸೂಚನೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವೆ ಸುಷ್ಮಾ ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Updated on: 
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಲ್ಲಿರುವ ಹಿಂದೂ ಸಮುದಾಯಕ್ಕೆ ರಕ್ಷಣೆ ಮತ್ತು ಭದ್ರತೆ ನೀಡಬೇಕೆಂದು ಪ್ರಧಾನ ಮಂತ್ರಿ ಶೇಕ್ ಹಸೀನಾ ಅವರಿಗೆ ಮನವರಿಕೆ ಮಾಡಿಕೊಡುವಂತೆ ಢಾಕಾದಲ್ಲಿರುವ ಭಾರತೀಯ ಹೈ ಕಮಿಷನರ್ ಅವರಿಗೆ ಆದೇಶ ನೀಡಿದ್ದಾರೆ.
ಬಾಂಗ್ಲಾದೇಶ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಅಲ್ಲಿನ ಹಿಂದೂಗಳ ಭದ್ರತೆ ಮತ್ತು ರಕ್ಷಣೆಗೆ ನಾವು ಎಷ್ಟು ತುಡಿಯುತ್ತಿದ್ದೇವೆ ಎಂದು ತಿಳಿಸುವಂತೆ ಭಾರತೀಯ ಹೈ ಕಮಿಷನರ್ ಗೆ ಸೂಚಿಸಿದ್ದೇವೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ನಡೆದ ಹೊಸ ದಾಳಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಕೆಲವು ಹಿಂದೂ ಜನರ ಮನೆಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಕೇಂದ್ರ ಬ್ರಹ್ಮಾಂಬರಿಯಾ ಜಿಲ್ಲೆಯಲ್ಲಿ ಎರಡು ದೇವಸ್ಥಾನಗಳನ್ನು ನಾಶಪಡಿಸಿದ್ದಾರೆ, ಹಿಂದೂ ಅಲ್ಪಸಂಖ್ಯಾತರ ಹಲವು ಧಾರ್ಮಿಕ ಸ್ಥಳಗಳನ್ನು ಕಳೆದ ಕೆಲ ದಿನಗಳಲ್ಲಿ ನಾಶಪಡಿಸಿದ್ದಾರೆ.
ಕೇಂದ್ರ ಬ್ರಹ್ಮಾಂಬರಿಯಾ ಜಿಲ್ಲೆಯ ನಾಸಿರ್ ನಗರದಲ್ಲಿ ನಿನ್ನೆ ದುಷ್ಕರ್ಮಿಗಳು ಕನಿಷ್ಠ 6 ಹಿಂದೂ ಮನೆಗಳನ್ನು ನಾಶಪಡಿಸಿದ್ದಾರೆ. ಅಲ್ಲದೆ 15 ದೇವಸ್ಥಾನಗಳು ಮತ್ತು 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಾಡಿದ್ದಾರೆ. 
ಪೊಲೀಸರು, ಅಕ್ಟೋಬರ್ 30ರಂದು ಬ್ರಹ್ಮಾಂಬರಿಯಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಸಂಬಂಧ ರಾತ್ರಿಪೂರ ನಡೆಸಿದ ಕಾರ್ಯಾಚರಣೆಯಲ್ಲಿ 33 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com