ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ ಪ್ರಕ್ರಿಯೆ ಮೂಲಕ ಕಾಯಂ ಸದಸ್ಯ ರಾಷ್ಟ್ರಗಳನ್ನು ಹೆಚ್ಚಿಸುವುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ್ದು, ಕಾಯಂ ಸದಸ್ಯತ್ವವನ್ನು ಹೆಚ್ಚಿಸುವುದರಿಂದ ಕೇವಲ ಕೆಲವು ರಾಷ್ಟ್ರಗಳ ಅಧಿಕಾರ ದಾಹವನ್ನು ಈಡೇರಿಸಿದಂತಾಗುತ್ತದೆ ಎಂದು ಹೇಳಿದೆ.
ಕಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಕೇವಲ ಅಧಿಕಾರ ದಾಹವನ್ನು ಈಡೇರಿಸಿದಂತಾಗುತ್ತದೆ, ಪ್ರಾತಿನಿಧ್ಯ ಸಮಸ್ಯೆಯನ್ನು ಬಗೆಹರಿಸಿದಂತಾಗುವುದಿಲ್ಲ ಎಂದು ಭದ್ರತಾ ಮಂಡಳಿ ಸುಧಾರಣಾ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿರುವ ಪಾಕಿಸ್ತಾನದ ರಾಯಭಾರಿ ಮಲಿಹಾ ಲೋಧಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸೇರಿದಂತೆ ಜಿ-4 ರಾಷ್ಟ್ರಗಳಾದ ಬ್ರೆಜಿಲ್, ಜರ್ಮನಿ, ಜಪಾನ್ ರಾಷ್ಟ್ರಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಯತ್ನಿಸುತ್ತಿದೆ. ಆದರೆ ಭಾರತದ ಸದಸ್ಯತ್ವಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸುತ್ತಿದ್ದು ಅಧಿಕಾರ ದಾಹವನ್ನು ತೋರುತ್ತದೆ ಎಂದು ಹೇಳಿದೆ.