

ಇಟಾ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು ದುಷ್ಕರ್ಮಿಗಳು ಆಕೆಯ ಬಳಿಯಿದ್ದ ಹಣ ಹಾಗೂ ಒಡವೆ ದೋಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.
ಬಸ್ ಸ್ಟಾಂಡ್ ನಲ್ಲಿ ವಾಹನಕ್ಕಾಗಿ ಮಹಿಳೆ ಕಾಯುತ್ತಿದ್ದ ವೇಳೆ, ಪರಿಚತ ವ್ಯಕ್ತಿ ಕಾರಿನಲ್ಲಿ ಬಂದಿದ್ದಾನೆ. ನಂತರ ಆಕೆಯನ್ನು ಕರೆದೊಯ್ದಿದ್ದಾನೆ, ಈ ವೇಳೆ ಆತ ತನ್ನ ಜೊತೆ ಇನ್ನು ಮೂವರನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ.
ನಂತರ ನಾಲ್ವರು ಸೇರಿ ಆಕೆಗೆ ಮತ್ತು ಬರುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿ ನಾಲ್ವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಬಳಿಯಿದ್ದ ನಾಲ್ಕು ಸಾವಿರ ರೂ ಹಣ ದೋಚಿರುವ ದುಷ್ಕರ್ಮಿಗಳು ಆಕೆಯ ಚಿನ್ನದ ಓಲೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.