
ಬಿಹಾರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪಿ ಬಿಹಾರದ ಆರ್ ಜೆಡಿ ಶಾಸಕ ರಾಜ್ ಬಲಾಬ್ ಯಾದವ್ ಶರಣಾಗಿದ್ದಾರೆ.
ಅತ್ಯಾಚಾರ ಆರೋಪಿಯಾಗಿದ್ದ ರಾಜ್ ಬಲ್ಲಾಬ್ ಗೆ ಸುಪ್ರೀಂ ಕೋರ್ಟ್ ಜಾಮೀನು ರದ್ಧುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ರಾಜ್ ನಳಂದಾದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.
ವಿಚಾರಣೆ ವೇಳೆ ಸಂತ್ರಸ್ತೆ ತನ್ನ ಹೇಳಿಕೆ ದಾಖಲಿಸುವವರೆಗೂ ರಾಬ್ ಬಲ್ಲಾಬ್ ನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸೆಪ್ಟಂಬರ್ 30 ಪಾಟ್ನಾ ಹೈಕೋರ್ಟ್ ಶಾಸಕನಿಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತ್ತು.
Advertisement