ನೋಟ್ ಬ್ಯಾನ್ ಕುರಿತಂತೆ ಪ್ರತಿಪಕ್ಷಗಳ ಪ್ರತಿಕ್ರಿಯೆ ಹೇಗಿತ್ತು?

500 ಮತ್ತು 1000 ರು. ಮುಖಬೆಲೆಯ ನೋಟ್ ಗಳ ಮೇಲೆ ನಿಷೇಧ ಹೇರಿರುವ ಕೇಂದ್ರಸರ್ಕಾರದ ನಿಲುವಿಗೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಉದ್ಯಮ ಹಾಗೂ ರಾಜಕೀಯ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: 500 ಮತ್ತು 1000 ರು. ಮುಖಬೆಲೆಯ ನೋಟ್ ಗಳ ಮೇಲೆ ನಿಷೇಧ ಹೇರಿರುವ ಕೇಂದ್ರಸರ್ಕಾರದ ನಿಲುವಿಗೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಉದ್ಯಮ ಹಾಗೂ ರಾಜಕೀಯ  ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಬಿಐ ನ ಈ ಕಠಿಣ ನಿರ್ಧಾರಗಳ ಕುರಿತಂತೆ ವಿವಿಧ ಪಕ್ಷಗಳು ನೀಡಿರುವ ಪ್ರತಿಕ್ರಿಯೆ ಹೀಗಿದೆ.

ಕಪ್ಪು ಹಣ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಯಾವಾಗಲೂ ಸಕಾರಾತ್ಮಕವಾಗಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ನೀತಿಯಿಂದ ಜನಸಾಮಾನ್ಯರು ಅವಸ್ಥೆ ಪಡಬೇಕಿದೆ. ಅಧಿಕಾರಕ್ಕೆ ಬಂದು ಎರಡೂವರೆ  ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ ದಿಢೀರನೇ 500 ಮತ್ತು 1000 ರು.ನೋಟ್ ಗಳನ್ನು ನಿಷೇಧಿಸಿದೆ. ಸರ್ಕಾರದ ಈ ನಿರ್ಧಾರದಿಂದ ಮಧ್ಯಮ ವಾಣಿಜ್ಯೋಧ್ಯಮಿಗಳು, ಸಣ್ಣ ವಾಪಾರಸ್ಥರು ಪರದಾಡುವಂತಾಗಿದೆ,
- ಮಹಮದ್ ಸಲೀಂ ಸಿಪಿಎಂ ಮುಖಂಡ

ಕೇಂದ್ರ ಸರ್ಕಾರದ ನಡೆಯಲ್ಲಿ ಆರ್ಥಿಕ ಗೊಂದಲಗಳಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರದ ನಡೆ ಮಧ್ಯಮ ಹಾಗೂ ಕೆಳ ವರ್ಗದ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.  ಭ್ರಷ್ಟಾಚಾರದ ವಿರುದ್ಧ ಹೋರಾಟದ ಸೋಗಿನಲ್ಲಿ ಕೇಂದ್ರ ಸರ್ಕಾರ ಜನ ಸಾಮಾನ್ಯರೊಂದಿಗೆ ಚೆಲ್ಲಾಟವಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯಬೇಕು.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ

ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧದ ಸರ್ಕಾರದ ಹೋರಾಟಕ್ಕೆ ಕಾಂಗ್ರೆಸ್ ಸದಾಕಾಲ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದೆ. ಅದನ್ನೇ ಮುಂದೆಯೂ ಮಾಡುತ್ತದೆ. ಆದರೆ ಸರ್ಕಾರದ ದಿಢೀರ್ ನಡೆ ಜನ ಸಾಮಾನ್ಯರಿಗೆ  ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅಗತ್ಯ ವಸ್ತುಗಳ ಕೊಳ್ಳಲು ಜನ ಪರದಾಡುವಂತಾಗಿದೆ.
-ರಣ್ ದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ಮಹಮದ್ ಬಿನ್ ತುಘಲಕ್ ಆತ್ಮ ಪ್ರಧಾನಿ ಮೋದಿ ಅವರೊಳಗೆ ಸೇರಿಕೊಂಡಂತಿದೆ. ಭಾರತದಲ್ಲಿ ಶೇ. 65ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಹೊಟ್ಟೆ ಮೇಲೆ ಕೇಂದ್ರ ಸರ್ಕಾರ ಕಾಲಿನಿಂದ ಹೊಡೆದಿದೆ. ಪ್ರಧಾನಿಯವರು ತುಘಲಕ್ ಆಡಳಿತವನ್ನು ನೀಡುತ್ತಿದ್ದು ಭಾರತ ಅರ್ಥವ್ಯವಸ್ಥೆಯನ್ನೇ ಹದೆಗೆಡಿಸಲು ಹೊರಟಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಈ ಬಗ್ಗೆ ಪುನರ್ ವಿಚಾರ ಮಾಡಬೇಕು.
-ಮನೀಶ್ ತಿವಾರಿ, ಕಾಂಗ್ರೆಸ್ ಮುಖಂಡ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com