ಜೆಎನ್'ಯು ವಿದ್ಯಾರ್ಥಿ ನಾಪತ್ತೆ: ಪತ್ತೆಗಾಗಿ ಮನೋತಜ್ಞರ ಮೊರೆ ಹೋದ ಪೊಲೀಸರು

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ವಿದ್ಯಾರ್ಥಿ ಪತ್ತೆಗಾಗಿ ಪೊಲೀಸರು ಗುರುವಾರ ವಿದ್ಯಾರ್ಥಿಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ಮನೋತಜ್ಞರ...
ನಾಪತ್ತೆಯಾಗಿರು ತಮ್ಮ ಮಗನನ್ನು ನೆನೆದು ಕಣ್ಣೀರಿಡುತ್ತಿರುವ ನಜೀಬ್ ತಾಯಿ ಫಾತಿಮಾ
ನಾಪತ್ತೆಯಾಗಿರು ತಮ್ಮ ಮಗನನ್ನು ನೆನೆದು ಕಣ್ಣೀರಿಡುತ್ತಿರುವ ನಜೀಬ್ ತಾಯಿ ಫಾತಿಮಾ

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ವಿದ್ಯಾರ್ಥಿ ಪತ್ತೆಗಾಗಿ ಪೊಲೀಸರು ಗುರುವಾರ ವಿದ್ಯಾರ್ಥಿಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ಮನೋತಜ್ಞರ ಮೊರೆ ಹೋಗಿದ್ದಾರೆ.

ಜೆಎನ್ ಯುನಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಜೀಬ್ ಅಹ್ಮಮದ್ (27) ಎಂಬ ವಿದ್ಯಾರ್ಥಿ ಕಳೆದ ಅಕ್ಟೋಬರ್ 15 ರಂದು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ. ಸಾಕಷ್ಟು ಹುಡುಕಾಟ ನಡೆಸಿದ್ದರೂ ಈ ವರೆಗೂ ವಿದ್ಯಾರ್ಥಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಈ ಹಿಂದೆ ನಜೀಬ್ ಗೆ ಚಿಕಿತ್ಸೆ ನೀಡಿದ್ದ ವೈದ್ಯರ ಸಹಾಯ ಕೇಳಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ತನಿಖೆ ವೇಳೆ ಈ ಹಿಂದೆ ಮಾತನಾಡಿದ್ದ ವಿಮಾನ್ಸ್ ಆಸ್ಪತ್ರೆಯ ವೈದ್ಯರು ನಜೀಬ್ ಒಸಿಡಿ ಜೊತೆಗೆ ಖಿನ್ನತೆಯೊಳಗಾಗಿದ್ದ ಎಂದು ಹೇಳಿದ್ದರು.

ನಾಪತ್ತೆಯಾಗಿರುವ ವಿದ್ಯಾರ್ಥಿಗಾಗಿ ಸಾಕಷ್ಟು ದಾರಿಗಳ ಮೂಲಕ ಹುಡುಕಾಟವನ್ನು ನಡೆಸಿದ್ದೇವೆ, ಇದೀಗ ಮಾನಸಿಕ ದೃಷ್ಟಿಕೋನದಲ್ಲೂ ತನಿಖೆ ನಡೆಸಲಾಗುತ್ತಿದೆ. ಇದು ತನಿಖೆಗೆ ಸಹಕಾರಿಯಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಒಸಿಡಿ ಮತ್ತು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಮತ್ತು ಕೆಲವೊಮ್ಮೆ ಮನಸ್ಸಿಗೆ ನೋವಾದಾಗ ಹಾಗೂ ಜಗಳವಾದಾಗ ತಮ್ಮ ಕುಟುಂಬಸ್ಥರನ್ನು ಬಿಟ್ಟು ಹೊರ ಹೋಗುವ ಲಕ್ಷಣವನ್ನು ಹೊಂದಿರುತ್ತಾರೆಂದು ತಜ್ಞರು ಮಾಹಿತಿ ನೀಡಿದ್ದಾರೆ.

ತಜ್ಞರ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಇದೀಗ ನಜೀಬ್ ಅವರ ತಾಯಿ, ಕುಟುಂಬಸ್ಥರು ಹಾಗೂ ವಿವಿಯ ಆಡಳಿತ ಮಂಡಳಿಯವರನ್ನು ಸಮಾಧಾನದಿಂದ ಇರುವಂತೆ ಹೇಳಲಾಗಿದೆ. ನಾಪತ್ತೆ ಕುರಿತಂತೆ ಯಾವುದೇ ರೀತಿಯಲ್ಲಿ ಗಲಾಟೆ ಮಾಡಿದರೂ ಅದು ಆತನನ್ನು ಮತ್ತಷ್ಟು ಭಯದಲ್ಲಿರುವಂತೆ ಮಾಡುತ್ತದೆ. ಹೀಗಾಗಿ ಸಮಾಧಾನದಿಂದ ಇರುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com