ವಿಶ್ವಾಸ್ ವರ್ತಕ್ ಎಂಬುವವರು ಹರಿ ಓಂ ನಗರ್ ನ ಬ್ಯಾಂಕ್ ನಲ್ಲಿ ಘಟನೆ ನಡೆದಿದ್ದು, ಸುಮಾರು ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಮೃತಪಟ್ಟಿದ್ದಾರೆ. ನೋಟ್ ಗಳನ್ನು ರದ್ದುಗೊಳಿಸಿದ 3 ದಿನಗಳ ಬಳಿಕ ಎಟಿಎಂ ನಿಂದ ಹಣ ತೆಗೆಯುವುದಕ್ಕೂ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು, ಮುಂಬೈ ಗಳಲ್ಲಿ ಹಲವಾರು ಎಟಿಎಂ ಗಳಲ್ಲಿ ಹಣ ಸಿಗದೇ ನಾಗರಿಕರು ನಿರಾಶರಾಗಿದ್ದಾರೆ. ಇನ್ನೂ ಕೆಲವೆಡೆ ಹಣ ತೆಗೆಯಲು ಸಾಧ್ಯವಾಯಿತಾದರೂ ಸಹ ಕಡಿಮೆ ಮುಖಬೆಲೆ ನೋಟುಗಳ ಚಿಲ್ಲರೆ ಪಡೆಯಲು ನಾಗರಿಕರು ಸಮಸ್ಯೆ ಎದುರಿಸುವ ಘಟನೆಗಳೂ ನಡೆದಿವೆ.