ಕುಸ್ತಿಪಟುವಿಗೆ ಸಲಹೆ ನೀಡಲು ಹೋಗಿ ಮಣ್ಣು ಮುಕ್ಕಿದ ಆರ್‍‍ಜೆಡಿ ಶಾಸಕ

ಬಿಹಾರದ ಆರ್‍‍ಜೆಡಿ ಶಾಸಕರೊಬ್ಬರು ಕುಸ್ತಿಪಟುವಿಗೆ ಉಚಿತ ಸಲಹೆ ನೀಡಲು ಹೋಗಿ ಮಣ್ಣು ಮುಕ್ಕಿ ಮುಖಭಂಗಕ್ಕೆ ಒಳಗಾಗಿದ್ದಾರೆ...
ಶಾಸಕನನ್ನು ಎತ್ತಿ ಎಸೆಯುತ್ತಿರುವ ಕುಸ್ತಿಪಟು
ಶಾಸಕನನ್ನು ಎತ್ತಿ ಎಸೆಯುತ್ತಿರುವ ಕುಸ್ತಿಪಟು
Updated on: 
ಪಾಟ್ನಾ/ಅರಾ: ಬಿಹಾರದ ಆರ್‍‍ಜೆಡಿ ಶಾಸಕರೊಬ್ಬರು ಕುಸ್ತಿಪಟುವಿಗೆ ಉಚಿತ ಸಲಹೆ ನೀಡಲು ಹೋಗಿ ಮಣ್ಣು ಮುಕ್ಕಿ ಮುಖಭಂಗಕ್ಕೆ ಒಳಗಾಗಿದ್ದಾರೆ. 
45ನೇ ಸಂಸ್ಥಾಪನಾ ದಿನದ ಅಂಗವಾಗಿ ಭೋಜ್ ಪುರ ಜಿಲ್ಲೆಯ ಅರಾದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯ ನೋಡಲು ಬಂದಿದ್ದ ಬಿಹಾರದ ಸಂದೇಶ್ ವಿಧಾನಸಭೆ ಕ್ಷೇತ್ರದ ಆರ್‍‍ಜೆಡಿ ಶಾಸಕ ಅರುಣ್ ಯಾದವ್ ಸುಮ್ಮನಿರದೇ 19 ವರ್ಷದ ಕುಸ್ತಿಪಟು ರಾಜ್ ಕುಮಾರ್ ಪಾಸ್ವಾನ್ ಎಂಬಾತನಿಗೆ ಹಾಗೆ ಮಾಡು, ಹೀಗೆ ಮಾಡು ಎಂದು ಒಂದಾದ ಮೇಲೆ ಒಂದು ಸಲಹೆ ನೀಡುತ್ತಿರುತ್ತಾರೆ. ಇದರಿಂದ ಸಹನೆ ಕಳೆದುಕೊಂಡ ರಾಜ್ ಕುಮಾರ್ ಅರುಣ್ ಯಾದವ್ ನನ್ನು ಎತ್ತಿಕೊಂಡು ಕೆಳಗೆ ಬಿಸಾಕಿದ್ದಾನೆ. 
ಇದರಿಂದ ಭಾರೀ ಮುಖಭಂಗಕ್ಕೆ ಒಳಗಾದ ಅರುಣ್ ತೊಡೆತಟ್ಟಿಕೊಂಡು ರಾಜ್ ಕುಮಾರ್ ವಿರುದ್ಧ ಕುಸ್ತಿ ಆಡಲು ಮುಂದಾದರು, ಅಷ್ಟರಲ್ಲಿ ಅಲ್ಲೇ ಇದ್ದ ಆಯೋಜಕರು ಇಬ್ಬರನ್ನೂ ಸಮಾಧಾನ ಪಡಿಸಿ ವಿವಾದ ಬಗೆಹರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com