ನೋಟು ನಿಷೇಧದ ಹಿಂದೆ ಹಗರಣ: ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹ

ನೋಟು ನಿಷೇಧದ ಹಿಂದೆ ಹಗರಣವಿರುವುದಾಗಿ ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ನ್ಯಾಯಾಲಯ ಸೂಕ್ತ ರೀತಿಯ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶನಿವಾರ...
ಕಾಂಗ್ರೆಸ್ ಪಕ್ಷದ ನಾಯಕಿ ಶರ್ಮಿಷ್ಠ ಮುಖರ್ಜಿ
ಕಾಂಗ್ರೆಸ್ ಪಕ್ಷದ ನಾಯಕಿ ಶರ್ಮಿಷ್ಠ ಮುಖರ್ಜಿ
ನವದೆಹಲಿ: ನೋಟು ನಿಷೇಧದ ಹಿಂದೆ ಹಗರಣವಿರುವುದಾಗಿ ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ನ್ಯಾಯಾಲಯ ಸೂಕ್ತ ರೀತಿಯ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕಿ ಶರ್ಮಿಷ್ಠ ಮುಖರ್ಜಿಯವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಸ್ತಾಪ ಮಾಡುವುದಕ್ಕೂ ಮುನ್ನವೇ ಈ ಬಗ್ಗೆ ಕಾಂಗ್ರೆಸ್ ಹೇಳಿತ್ತು. ನೋಟಿನ ಮೇಲೆ ನಿಷೇಧ ಹೇರುವುದಕ್ಕೂ ಮುನ್ನ ಈ ಬಗೆಗಿನ ಮಾಹಿತಿ ಬಿಜೆಪಿ ನಾಯಕರಿಗಿತ್ತು ಎಂಬುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. 
ಈ ಬಗ್ಗೆ ಪ್ರಶಾಂತ್ ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ. ನೋಟಿನ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ಘೋಷಣೆ ಮಾಡುವುದಕ್ಕೂ ಕೇವಲ 1 ಗಂಟೆಗೂ ಮುನ್ನ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರೊಬ್ಬರು ರು.3 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಹಾಕಿದ್ದರು. ಈ ಬೆಳವಣಿಗೆಗಳನ್ನು ನೋಡಿದರೆ ಪ್ರಕಱಣ ಕುರಿತು ನ್ಯಾಯಾಲಯ ಸೂಕ್ತ ರೀತಿಯ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ. 
ರು.2000 ಮುಖಬೆಲೆ ನೋಟಿನ್ನು ಜಾರಿ ಮಾಡುವ ಮುಖಾಂತರ ಕಪ್ಪುಹಣವನ್ನು ಮಟ್ಟಹಾಕಲು ಹೇಗೆ ಸಾಧ್ಯ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com