ವರದಕ್ಷಿಣೆಗಾಗಿ ನವವಧುವನ್ನು ಕತ್ತು ಸೀಳಿ ಕೊಂದ ಮಾವ

ವರದಕ್ಷಿಣೆಗಾಗಿ ಮಾವನೊಬ್ಬ ನವವಿವಾಹಿತ ಸೊಸೆಯನ್ನು ಕೊಂದಿರುವ ಘಟನೆ ಮುಜಾಪರ್ ನಗರ ಜಿಲ್ಲೆಯ ಸಿಕ್ರೆದಾ ಎಂಬಲ್ಲಿ ನಡೆದಿದೆ. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಜಾಫರ್ ನಗರ: ವರದಕ್ಷಿಣೆಗಾಗಿ ಮಾವನೊಬ್ಬ ನವವಿವಾಹಿತ ಸೊಸೆಯನ್ನು ಕೊಂದಿರುವ ಘಟನೆ  ಮುಜಾಪರ್ ನಗರ ಜಿಲ್ಲೆಯ ಸಿಕ್ರೆದಾ ಎಂಬಲ್ಲಿ ನಡೆದಿದೆ.

ಸರಿತಾ ಮೃತ ದುರ್ದೈವಿ, ಶುಕ್ರವಾರದಿಂದ ಸರಿತಾ ನಾಪತ್ತೆಯಾಗಿದ್ದಾಳೆಂದು ಸ್ಥಳೀಯರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸರಿತಾ ಮಾವನನ್ನ ಬಂದಿಸಿದ್ದಾರೆ.

ತಾನು ಆಕೆಯನ್ನು ಕೊಂದು ಶವವನ್ನು ಮೋರಿಯಲ್ಲಿ ಬಿಸಾಡಿದ್ದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ. ಸರಿತಾ ಕುತ್ತಿಗೆಯನ್ನು ಸೀಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಏಪ್ರಿಲ್ ನಲ್ಲಿ ಸರಿತಾ ವಿವಾಹವಾಗಿತ್ತು. ಮನೆಯ ಇತರೆ ಸದಸ್ಯರು ನಾಪತ್ತೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com