ಕೋಝಿಕ್ಕೋಡು: ಬಸ್ ಪ್ರಯಾಣಿಕನಿಂದ 62 ಲಕ್ಷ ರೂಪಾಯಿ ಹಳೆ ನೋಟು ವಶ

1000 ರೂಪಾಯಿ ಮುಖಬೆಲೆಯ ಲೆಕ್ಕಕ್ಕೆ ಸಿಗದ ಸುಮಾರು 62 ಲಕ್ಷ ರೂಪಾಯಿ ಹೊಂದಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಝಿಕ್ಕೋಡು: ಸಾವಿರ ರೂಪಾಯಿ ಮುಖಬೆಲೆಯ ಲೆಕ್ಕಕ್ಕೆ ಸಿಗದ ಸುಮಾರು 62 ಲಕ್ಷ ರೂಪಾಯಿ ಹೊಂದಿದ್ದ ಪ್ರಯಾಣಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ 45 ವರ್ಷದ ರಶೀದ್ ಎಂಬಾತನು ಸರ್ಕಾರಿ ಬಸ್ಸಿನಲ್ಲಿ ನಸುಕಿನ ಜಾವ 4.30ರ ಸುಮಾರಿಗೆ ಕೋಝಿಕ್ಕೋಡು ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದ. ಆಗ ಎಂದಿನ ತಪಾಸಣೆಗೆ ಬಂದಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅವನ ಬಳಿ ಸಾವಿರ ರೂಪಾಯಿ ನೋಟುಗಳ 61 ಕಂತೆಯಿದ್ದವು.ಅಲ್ಲದೆ 50, 100 ರೂಪಾಯಿಗಳ ನೋಟುಗಳು ಕೂಡ ಇದ್ದವು.ಒಟ್ಟು 61,98,100 ರೂಪಾಯಿಗಳಿದ್ದವು. ಅವುಗಳನ್ನು ಬ್ಯಾಗಿನಲ್ಲಿ ತುಂಬಿಸಿಕೊಂಡು ಬಂದಿದ್ದ ಎಂದು ನಾಡಕ್ಕವ್ ಪೊಲೀಸರು ತಿಳಿಸಿದ್ದಾರೆ.
ಅಷ್ಟೊಂದು ಹಣ ಇದ್ದದ್ದಕ್ಕೆ ಅವನ ಬಳಿ ಸರಿಯಾದ ದಾಖಲೆಗಳಿರಲಿಲ್ಲ. ಪೊಲೀಸರು ನೋಟುಗಳನ್ನು ಬ್ಯಾಂಕಿಗೆ ಪರಿಶೀಲನೆಗೆಂದು ಕಳುಹಿಸಿದರು. ಆರೋಪಿಯನ್ನು ಬಂಧಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com