
ಕೋಟಾ: ಜನಿಸಿದ ಕೆಲವೇ ಗಂಟೆಗಳಲ್ಲಿ ವಿವಿಧ ಜನ್ಮ ಸಂಬಂಧಿ ರೋಗಗಳಿಂದ ಬಳಲುತ್ತಿದ್ದ ಆರು ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ಕೋಟಾದ ಆಸ್ಪತ್ರೆಯಲ್ಲಿ ನಡೆದಿದೆ.
ಹುಟ್ಟಿದ ಕೂಡಲೇ ನವಜಾತ ಶಿಶುಗಳು ಜನ್ಮಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದವು, ಹೀಗಾಗಿ ನವಜಾತ ಶಿಶುಗಳದ್ದು ಸ್ವಾಭಾವಿಕ ಸಾವು ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ತನಿಖೆ ನಡೆಸುವಂತೆ ತನಿಖಾ ಸಮಿತಿ ಆದೇಶಿಸಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ವರೆಗೆ ಈ ನವಜಾತ ಶಿಶುಗಳು ಸಾವನ್ನಪ್ಪಿವೆ. ಅದರಲ್ಲಿ ಎರಡು ಅವಳಿ ಮಕ್ಕಳು, ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಮಗು ಭಾನುವಾರ ರಾತ್ರಿ ಸಾವನ್ನಪ್ಪಿದ್ದವು.
ಸತ್ತ ಮಕ್ಕಳಲ್ಲಿ ಕೆಲವು ಅವಧಿಪೂರ್ವದಲ್ಲೇ ಹುಟ್ಟಿದ್ದವು, ಹೀಗಾಗಿ ಅವು ಬದುಕುಳಿಯುವುದು ಕಷ್ಟವಾಯಿತು ಎಂದು ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಸತ್ತ ಒಂದು ಮಗು ಈ ಆಸ್ಪತ್ರೆಯಲ್ಲಿ ಜನಿಸಿರಲಿಲ್ಲ, ಬ್ರೈನ್ ಡ್ಯಾಮೇಜ್ ನಿಂದಾಗಿ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ವೆಂಟಿಲೇಟರ್ ಹಾಕಲಾಗಿತ್ತು. ಅದು 36 ತಾಸುಗಳ ನಂತರ ಸಾವನ್ನಪ್ಪಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಘಟನೆ ಸಂಬಂಧ ವರದಿಯನ್ನು ಆಸ್ಪತ್ರೆ ಸೂಪರಿಂಡೆಂಟ್ ಗೆ ಸಲ್ಲಿಸಲಾಗಿದೆ, ಈಗ ಸದ್ಯ ಆಸ್ಪತ್ರೆಯಲ್ಲಿ 36 ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ.
Advertisement