
ನವದೆಹಲಿ: ನೋಟು ಬದಲಾವಣೆ ಜನರ ಕೈ ಬೆರಳುಗಳಿಗೆ ಹಚ್ಚಲಾಗುತ್ತಿರುವ ಅಳಿಸಲಾಗದ ಶಾಯಿ ಬಳಕೆಯನ್ನು ಕೂಡಲೇ ನಿಲ್ಲಿಸುವಂತೆ ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಸೂಚಿಸಿದೆ.
ಶಾಯಿ ಬಳಕೆ ಕುರಿತಂತೆ ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಪತ್ರವೊಂದನ್ನು ಬರದೆದಿದ್ದು, ಗ್ರಾಹಕರ ಕೈಬೆರಳುಗಳಿಗೆ ಹಾಕಲಾಗುತ್ತಿರುವ ಅಳಿಸಲಾಗದ ಶಾಯಿ ಭಲಕೆಯನ್ನು ನಿಲ್ಲಿಸುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
ರು.500 ಹಾಗೂ 1,00 ಮುಖಬೆಲೆಯ ದುಬಾರಿ ನೋಟುಗಳ ಬದಲಾವಣೆ ವೇಳೆ ಬ್ಯಾಂಕ್ ಗಳಲ್ಲಿ ಒತ್ತಡ ಕಡಿಮೆ ಮಾಡುವ ಹಲವಾಗಿ ಹಾಗೂ ಕಪ್ಪು ಹಣವನ್ನು ಇತರೆ ವ್ಯಕ್ತಿಗಳ ಮೂಲಕ ಬದಲಾವಣೆ ಮಾಡುವುದಕ್ಕೆ ತಡೆಯೊಡ್ಡುವ ಸಲುವಾಗಿ ಕೇಂದ್ರ ಸರ್ಕಾರ ಬಲಗೈ ಹೆಬ್ಬೆರಳುಗಳಿಗೆ ಶಾಯಿ ಹಾಕುವ ಕ್ರಮವನ್ನು ಜಾರಿಗೆ ತಂದಿತ್ತು.
ಈ ಹಿನ್ನಲೆಯಲ್ಲಿ ವಿತ್ತ ಸಚಿವಾಲಯಕ್ಕೆ ಚುನಾವಣಾ ಆಯೋಗ ಪತ್ರ ಬರೆದಿದ್ದು, ಗ್ರಾಹಕರ ಕೈ ಬೆರಳುಗಳಿಗೆ ಅಳಿಸಲಾಗದ ಶಾಯಿಯ ಗುರುತನ್ನು ಹಾಕುವುದರಿಂದ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದೆ.
ಮುಂದಿನ ವರ್ಷದಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 19 ರಂದು ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಉಪ ಚುನಾವಣೆ ನಡೆಯಲಿದೆ. ಚುನಾವಣೆ ವೇಳೆ ಮತದಾರರ ಎಡಗೈ ತೋರು ಬೆರಳಿನ ಮೇಲೆ ಶಾಯಿ ಗುರುತು ಹಾಕಲಾಗುತ್ತದೆ.
ಚುನಾವಣೆ ವೇಳೆ ಎಡಗೈ ತೋರು ಬೆರಳಿನ ಮೇಲೆ ಶಾಯಿ ಗುರುತು ಹಾಕುವುದರಿಂದ, ಯಾವುದೇ ಗೊಂದಲಗಳು ಉಂಟಾಗದಿರಲು ಎಚ್ಚರಿಕೆ ವಹಿಸಿರುವ ಸರ್ಕಾರ ಬ್ಯಾಂಕುಗಳಲ್ಲಿ ನೋಟು ಬದಲಾವಣೆ ಸಂದರ್ಭದಲ್ಲಿ ಜನರ ಬಲಗೈ ತೋರು ಬೆರಳುಗಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದ ಎಂದು ವರದಿಗಳಿಂದ ತಿಳಿದುಬಂದಿದೆ.
Advertisement