ಪತಿಯನ್ನು ಎಳೆದೊಯ್ಯುತ್ತಿರುವ ಪತ್ನಿ
ದೇಶ
ಸ್ಟ್ರೆಚರ್ ನೀಡದ ಆಸ್ಪತ್ರೆ: ಅನಾರೋಗ್ಯ ಪೀಡಿತ ಪತಿಯನ್ನು ಮೊದಲ ಮಹಡಿಗೆ ಎಳೆದು ತಂದ ಪತ್ನಿ
ಸ್ಟ್ರೆಚರ್ ನೀಡಲು ಆಸ್ಪತ್ರೆ ನಿರಾಕರಿಸಿದ ಕಾರಣ, ಅನಾರೋಗ್ಯ ಪೀಡಿತ ಗಂಡನನ್ನು ಪತ್ನಿ ಮೊದಲ ಮಹಡಿಗೆ ಬಲವಂತವಾಗಿ ಧರಧರನೆ ಎಳೆದು ಕೊಂಡು ಹೋಗಿರುವ ..
ಅನಂತಪುರ: ಸ್ಟ್ರೆಚರ್ ನೀಡಲು ಆಸ್ಪತ್ರೆ ನಿರಾಕರಿಸಿದ ಕಾರಣ, ಅನಾರೋಗ್ಯ ಪೀಡಿತ ಗಂಡನನ್ನು ಪತ್ನಿ ಮೊದಲ ಮಹಡಿಗೆ ಬಲವಂತವಾಗಿ ಧರಧರನೆ ಎಳೆದು ಕೊಂಡು ಹೋಗಿರುವ ಘಟನೆ ಅನಂತಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀವಾಣಿ ತನ್ನ 40 ವರ್ಷದ ಪತಿಯನ್ನು ಮೊದಲ ಮಹಡಿಗೆ ಕರೆದೊಯ್ಯಲು ಸ್ಟ್ರೆಚರ್ ಕೇಳಿದ್ದಾಳೆ, ಆದರೆ ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್ ಒದಗಿಸಲು ವಿಫಲರಾಗಿದ್ದಾರೆ.
ಇದರಿಂದ ಬೇರೆ ದಾರಿ ಕಾಣದ ಆಕೆ ಪತಿಯ ಕೈ ಹಿಡಿದಿಕೊಂಡು ಮೊದಲ ಮಹಡಿದೆ ಎಳೆದು ತಂದಿದ್ದಾಳೆ. ಆಕೆ ಪತಿಯನ್ನು ಎಳೆದು ಒಯ್ಯುತ್ತಿದ್ದರೆ ಬೇರೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರು.

