ಇನ್ನೊಂದು ಯಶಸ್ವಿ ಕಾರ್ಯಾಚರಣೆಯಲ್ಲಿ ತುಸ್ಪಾಲ್ ಮತ್ತು ಬೆಚ ಕಿಲಮ್ ಅರಣ್ಯ ಪ್ರದೇಶದಲ್ಲಿ ನಾರಾಯಣಪುರ ಜಿಲ್ಲಾ ಮೀಸಲು ಗುಂಪಿನ ಸಿಪಿಐ ಮಾವೋವಾದಿಗಳ ನಂಬರ್ 6, ಮಿಲಿಟರಿ ಕಂಪೆನಿಯ 6 ಮಂದಿ ಮಾವೋವಾದಿಗಳನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದುಹಾಕಿದ್ದಾರೆ. ಇದುವರೆಗೆ ಐವರು ನಕ್ಸಲೀಯರ ಶವ ದೊರೆತಿದ್ದು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.