ಬ್ಯಾಂಕ್ ಗ್ರಾಹಕರು, ಹಿರಿಯ ನಾಗರಿಕರಿಗೆ ಮಾತ್ರ ಇಂದು ಅವಕಾಶ, ನಾಳೆ ಬ್ಯಾಂಕ್ ರಜೆ!

ಬ್ಯಾಂಕುಗಳ ಮುಂದಿನ ನೂಕುನುಗ್ಗಲು ತಪ್ಪಿಸಲು ಮುಂದಾಗಿರುವ ಕೇಂದ್ರಸರ್ಕಾರ ಶನಿವಾರ ಹಿರಿಯ ನಾಗರಿಕರು ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆ ಅವಕಾಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬ್ಯಾಂಕುಗಳ ಮುಂದಿನ ನೂಕುನುಗ್ಗಲು ತಪ್ಪಿಸಲು ಮುಂದಾಗಿರುವ ಕೇಂದ್ರಸರ್ಕಾರ ಶನಿವಾರ ಹಿರಿಯ ನಾಗರಿಕರು ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆ ಅವಕಾಶ ನೀಡಿದೆ.

ಈ ಹಿನ್ನಲೆಯಲ್ಲಿ ಇತರೆ ಬ್ರಾಂಚ್ ನ ಬ್ಯಾಂಕ್ ಗ್ರಾಹಕರು ಹಾಗೂ ಇತರೆ ಬ್ಯಾಂಕ್ ಗ್ರಾಹಕರಿಗೆ ನೋಟು ಬದಲಾವಣೆಗೆ ಇಂದು ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ. ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಶನ್  ಅಧ್ಯಕ್ಷೆ ರಾಜೀವ್ ರಿಶಿ ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶನಿವಾರ ಹಿರಿಯ ನಾಗರಿಕರಿಗೆ ಮತ್ತು ಆಯಾ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಬ್ಯಾಂಕ್ ಗಳು ಸೇವೆ ನೀಡಲಿದೆ. ದೇಶ ಎಲ್ಲ ಬ್ಯಾಂಕ್‍ಗಳಿಗೆ ಇದು  ಅನ್ವಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಬ್ಯಾಂಕುಗಳಿಗೆ ರಜೆ
ಇನ್ನು ವಾರಾಂತ್ಯ ಮತ್ತು ಸರ್ಕಾರಿ ರಜೆಗಳೂ ಸೇರಿದಂತೆ ಸತತ 2 ವಾರಗಳ ಕಾರ್ಯ ನಿರ್ವಹಿಸಿದ್ದ ಬ್ಯಾಂಕ್ ಸಿಬ್ಬಂದಿಗಳಿಗೆ ನಾಳೆ ಭಾನುವಾರ ರಜೆ ನೀಡಲಾಗಿದೆ. ಹೀಗಾಗಿ ನಾಳೆ ಬ್ಯಾಂಕಿನ ಯಾವುದೇ ಕಾರ್ಯ ಚಟುವಟಿಕೆಗಳು  ನೆಯುವುದಿಲ್ಲ. ಗ್ರಾಹಕರ ಇದೇ ತಮ್ಮ ತಮ್ಮ ಬ್ಯಾಂಕಿನಲ್ಲಿ ಹಣ ಬದಲಾವಣೆ ಮತ್ತು ಹಣ ಠೇವಣಿ ಮಾಡಬಹುದು. ಇತರೆ ಬ್ಯಾಂಕು ಅಥವಾ ಬ್ರಾಂಚಿನಲ್ಲಿ ಸೇವೆ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com