ಗಡಿ ನಿಯಂತ್ರಣ ರೇಖೆ ಬಳಿ ಭಾರತ ಸೇನೆಯಿಂದ ದಾಳಿ; 3 ಮಕ್ಕಳು ಸಾವು: ಪಾಕಿಸ್ತಾನ

ಭಾರತೀಯ ಸೇನಾಪಡೆಯ ಗುಂಡಿನ ದಾಳಿಗೆ ಗಡಿ ನಿಯಂತ್ರಣ ರೇಖೆ ಬಳಿಯ ಪಾಕ್ ಆಡಳಿತ...
ಗಡಿ ನಿಯಂತ್ರಣ ರೇಖೆ ಬಳಿ ಕಾವಲು ಕಾಯುತ್ತಿರುವ ಯೋಧರು(ಸಂಗ್ರಹ ಚಿತ್ರ)
ಗಡಿ ನಿಯಂತ್ರಣ ರೇಖೆ ಬಳಿ ಕಾವಲು ಕಾಯುತ್ತಿರುವ ಯೋಧರು(ಸಂಗ್ರಹ ಚಿತ್ರ)
ಮುಜಾಫರಾಬಾದ್: ಭಾರತೀಯ ಸೇನಾಪಡೆಯ ಗುಂಡಿನ ದಾಳಿಗೆ ಗಡಿ ನಿಯಂತ್ರಣ ರೇಖೆ ಬಳಿಯ ಪಾಕ್ ಆಡಳಿತ ಕಾಶ್ಮೀರದ ಗ್ರಾಮದಲ್ಲಿನ ಮೂವರು ಮಕ್ಕಳು ಮೃತಪಟ್ಟು ಮತ್ತೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಫಿರಂಗಿ ಚಿಪ್ಪುಗಳನ್ನು ಬಂದೂಕಿನಲ್ಲಿಟ್ಟು ಭಾರತೀಯ ಸೇನೆ ಹೊಡೆದ ಗುಂಡು ಗಡಿ ನಿಯಂತ್ರಣ ರೇಖೆ ಬಳಿಯ ಕೊಟ್ಲಿ ಜಿಲ್ಲೆಯಲ್ಲಿನ ಮನೆಯೊಂದಕ್ಕೆ ಹೋಗಿ ಬಿದ್ದಿದ್ದರಿಂದಾಗಿ ಇಬ್ಬರು ಬಾಲಕಿಯರು ಮತ್ತು ಅವರ ಸೋದರ ಸ್ಥಳದಲ್ಲಿಯೇ ಅಸುನೀಗಿದರು ಎಂದು ಸ್ಥಳೀಯ ಆಡಳಿತಾಧಿಕಾರಿ ರಾಜಾ ಅರಿಫ್ ಮೆಹಮೊದ್ದ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಎಲ್ಲಾ ಮಕ್ಕಳೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಈ ಮಧ್ಯೆ, ಪಾಕಿಸ್ತಾನ ಮತ್ತು ಭಾರತೀಯ ಗಡಿ ರಕ್ಷಣಾ ಪಡೆ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ಚಕಮಕಿ ನಡೆಸಿವೆ ಎಂದು ಆಂತರಿಕ ಸೇವೆ ಸಾರ್ವಜನಿಕ ಸಂಪರ್ಕ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com