ಉತ್ತರ ಪ್ರದೇಶದ ಹೆದ್ದಾರಿಯಲ್ಲಿ ಲ್ಯಾಂಡ್ ಆದ ಸೇನಾ ಯುದ್ಧ ವಿಮಾನಗಳು!

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಇಳಿಕೆಗೆ ಅನುವು ಮಾಡಿಕೊಡುವ ಸೌಲಭ್ಯ ಹೊಂದಿರುವ ಉನ್ನತ ಮಟ್ಟದ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ಆಗ್ರಾ-ಲಖನೌ ಹೆದ್ದಾರಿಯಲ್ಲಿ ಇಳಿದ ಯುದ್ಧ ವಿಮಾನ (ಪಿಟಿಐ ಚಿತ್ರ)
ಆಗ್ರಾ-ಲಖನೌ ಹೆದ್ದಾರಿಯಲ್ಲಿ ಇಳಿದ ಯುದ್ಧ ವಿಮಾನ (ಪಿಟಿಐ ಚಿತ್ರ)

ಲಖನೌ: ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಇಳಿಕೆಗೆ ಅನುವು ಮಾಡಿಕೊಡುವ ಸೌಲಭ್ಯ ಹೊಂದಿರುವ ಉನ್ನತ ಮಟ್ಟದ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.

ಸಿಎಂ ಅಖಿಲೇಶ್ ಯಾದವ್ ಅವರ ಕನಸಿನ ಯೋಜನೆ ಕೂಡ ಆಗಿರುವ  ಉತ್ತರ ಪ್ರದೇಶದ ಉನ್ನಾವ್ ಬಳಿ ನಿರ್ಮಾಣ ಮಾಡಲಾಗಿರುವ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿ ಸೋಮವಾರ ಲೋಕಾರ್ಪಣೆ ಮಾಡಲಾಯಿತು.  ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿಯೇ ಹೆದ್ದಾರಿಯ ಉದ್ಘಾಟನೆ ನಡೆದಿದ್ದು ವಿಶೇಷವಾಗಿತ್ತು.

ಈ ವಿಶೇಷ ಹೆದ್ದಾರಿ ಐಎಎಫ್‌ ಯುದ್ಧ ವಿಮಾನ ಇಳಿಯುವ ಸೌಲಭ್ಯ ಹೊಂದಿದ್ದು, ತುರ್ತು ಪರಿಸ್ಥಿತಿಯಲ್ಲಿ ಭಾರತೀಯ ಸೇನೆ ಈ ಹೆದ್ದಾರಿಯನ್ನು ತಾತ್ಕಾಲಿಕ ರನ್ ವೇ ಆಗಿ ಕೂಡ ಬಳಕೆ ಮಾಡಬಹುದಾಗಿದೆ.

ಈ ವೇಳೆ ಮಾತನಾಡಿದ ಮುಲಾಯಂಸಿಂಗ್ ಯಾದವ್ ಅವರು, ‘ಈ ಯೋಜನೆಗೆ 4 ವರ್ಷಗಳು ಹಿಡಿಯಲಿವೆ ಎಂದು ಅಧಿಕಾರಿಗಳು ಹೇಳಿದಾಗ ಭೂಮಿಪೂಜೆಗೆ ನಿರಾಕರಿಸಿದ್ದೆ. ಬಳಿಕ ಈ ಯೋಜನೆಯನ್ನು 22 ತಿಂಗಳಲ್ಲಿ  ಮುಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಫಲಿತಾಂಶ ನಿಮ್ಮ ಮುಂದಿದೆ’ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಸಿಎಂ ಅಖಿಲೇಶ್ ಯಾದವ್ ಅವರು, ಇಂಥಹ  ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲ. ಇಂತಹ  ಉತ್ತಮ ಕೆಲಸಗಳನ್ನು ಮುಂದಿಟ್ಟುಕೊಂಡು ಸಮಾಜವಾದಿ ಪಕ್ಷದ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ’ ಎಂದು ಹೇಳಿದರು.

ಹೆದ್ದಾರಿ ವಿಶೇಷತೆಗಳೇನು?
ಉತ್ತರ ಪ್ರದೇಶದ ಉನ್ನಾವ್ ಬಳಿ ನಿರ್ಮಾಣ ಮಾಡಲಾಗಿರುವ ಈ ವಿಶೇಷ ಹೆದ್ದಾರಿ ಆರು ಪಥಗಳನ್ನು ಹೊಂದಿದ್ದು, ಸುಮಾರು 302 ಕಿ.ಮೀ ಉದ್ದವಿದೆ. ಈ ವಿಶೇಷ ಯೋಜನೆಗಾಗಿ ಸುಮಾರು 7 ಸಾವಿರ ಎಕರೆ ಭೂಮಿ ಸ್ವಾಧೀನ  ಪಡಿಸಿಕೊಳ್ಳಲಾಗಿದ್ದು, 15 ಸಾವಿರ ಕೋಟಿ ರು. ವೆಚ್ಚದಲ್ಲಿ ಈ ವಿಶೇಷ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರವೇ ಭರಿಸಿದ್ದು, ಈ ವಿಶೇಷ ಹೆದ್ದಾರಿಯಲ್ಲಿ ಪ್ರತೀ  ಗಂಟೆಗೆ 120 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸಬಹುದಾಗಿದೆ. ಪ್ರಮುಖವಾಗಿ ಕೃಷಿಕರಿಗೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಸರಕುಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಸಾಗಿಸಲು ಈ ಹೆದ್ದಾರಿ ಅನುಕೂಲ ಕಲ್ಪಿಸಲಿದೆ.

ಇನ್ನು ಯುದ್ಧದಂತಹ ತುರ್ತು ಪರಿಸ್ಥಿತಿಗಳು ಎದುರಾದರೆ, ಆಗ ವಾಯುನೆಲೆಗಳು ಸೇವೆಗೆ ಅಲಭ್ಯವಾದರೆ ಹೆದ್ದಾರಿಯನ್ನೇ ರನ್ ವೇ ಆಗಿ ಬಳಸಿಕೊಳ್ಳುವ ತಂತ್ರಜ್ಞಾನವನ್ನು ಈ ವಿಶೇಷ ಹೆದ್ದಾರಿಯಲ್ಲಿ ಅಳವಡಿಸಲಾಗಿದೆ.  ಇದಕ್ಕಾಗಿ ಉನ್ನಾವ್ ಬಳಿ ಸುಮಾರು 3.2 ಕಿ.ಮೀ ಉದ್ಧದ ವಿಶೇಷ ರನ್ ವೇ ಗುಣಮಟ್ಟದ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರ ಪರೀಕ್ಷೆ ಕೂಡ ನಿನ್ನೆ ವಿದ್ಯುಕ್ತವಾದಿ ನಡೆಯಿತು. ವಾಯುಸೇನೆ 8 ಫೈಟರ್ ಜೆಟ್  ವಿಮಾನಗಳು ಯಶಸ್ವಿಯಾಗಿ ಇಲ್ಲಿ ಇಳಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com