ಸ್ವದೇಶಿ ನಿರ್ಮಿತ ಅಗ್ನಿ-1 ಕ್ಷಿಪಣಿ ಯಶಸ್ವಿ ಪರೀಕ್ಷೆ

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ನಿರ್ಮಾಣದ ಅಗ್ನಿ-1 ಖಂಡಾಂತರ ಕ್ಷಿಪಣಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಉಡಾಯಿಸಿದೆ....
ಅಗ್ನಿ-1
ಅಗ್ನಿ-1
ಭುವನೇಶ್ವರ್: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ನಿರ್ಮಾಣದ ಅಗ್ನಿ-1 ಖಂಡಾಂತರ ಕ್ಷಿಪಣಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಉಡಾಯಿಸಿದೆ. 
ಒರಿಸ್ಸಾದ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಮಂಗಳವಾರ ಬೆಳಗ್ಗೆ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಒಂದೇ ಹಂತದಲ್ಲಿ ಸ್ಫೋಟಿಸುವ ಸಾಮರ್ಥ್ಯವುಳ್ಳ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. 
ಅಗ್ನಿ-1 ಕ್ಷಿಪಣಿ ತನ್ನು ಗುರಿಯನ್ನು ಕ್ರಮಿಸಿ ಸ್ಫೋಟಗೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಸ್ಟ್ರಾಟೆಜಿಕ್ ಫೋರ್ಸಸ್ ಕಮ್ಯಾಂಡ್(ಎಸ್ಎಫ್ಸಿ) ಅಗ್ನಿ-1 ಸಾಮರ್ಥ್ಯ ಪರೀಕ್ಷೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸ್ವದೇಶಿ ನಿರ್ಮಿತ ಅಗ್ನಿ-1 ಕ್ಷಿಪಣಿ ಪ್ರತಿ ಸೆಕೆಂಡ್ ಗೆ 2.5 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. 9 ನಿಮಿಷ 36 ಸೆಕೆಂಡ್ ನಲ್ಲಿ 700 ಕಿ.ಮೀ ಕ್ರಮಿಸಿ ಅಪ್ಪಳಿಸುತ್ತದೆ. ಅಗ್ನಿ ಕ್ಷಿಪಣಿ 12 ಟನ್ ತೂಕವಿದ್ದು, 15 ಮೀಟರ್ ಉದ್ದವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com