ಜಮ್ಮು-ಕಾಶ್ಮೀರ ಬ್ಯಾಂಕ್'ನಲ್ಲಿ ದರೋಡೆ: ರು.40 ಲಕ್ಷ ಹಣವನ್ನು ದೋಚಿದ ದುಷ್ಕರ್ಮಿಗಳು

ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್ ವೊಂದಕ್ಕೆ ನುಗ್ಗಿರುವ ದರೋಡೆಕೋರರ ಗುಂಪೊಂದು ರು. 40 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಕಿಶ್ಟ್'ವಾರ್ ಜಿಲ್ಲೆಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್ ವೊಂದಕ್ಕೆ ನುಗ್ಗಿರುವ ದರೋಡೆಕೋರರ ಗುಂಪೊಂದು ರು. 40 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಕಿಶ್ಟ್'ವಾರ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬ್ಯಾಂಕ್ ಶೆಟರ್ ಒಡೆದಿರುವುದನ್ನು ಕಂಡ ಅಗ್ರಾಲ್ ಗ್ರಾಮದ ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಶೀಲನೆ ನಡೆಸಿದಾಗ ದರೋಡೆ ನಡೆದಿರುವುದು ಖಚಿತವಾಗಿದೆ.

ಬ್ಯಾಂಕಿನಲ್ಲಿ ರು. 500 ಹಾಗೂ ರು.1,000 ನೋಟುಗಳ 20 ಲಕ್ಷ ಹಣ ಹಾಗೂ ರು.2,000 ಹಾಗೂ ರು.100 ನೋಟಿನ ರು. 20 ಲಕ್ಷ ಹಣವಿತ್ತು ಎಂದು ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಭದ್ರತಾ ಸಿಬ್ಬಂದಿ ಇಲ್ಲದೆ ಇರುವುದನ್ನು ನೋಡಿಕೊಂಡು ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ತಡರಾತ್ರಿ ಘಟನೆ ನಡೆದಿದೆ, ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com