ಬುಲೆಟ್ ಪ್ರೂಫ್ ಬಂಗಲೆ ಗೃಹ ಪ್ರವೇಶ ಮಾಡಿದ ತೆಲಂಗಾಣ ಸಿಎಂ ಕೆಸಿಆರ್

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಭವ್ಯ ಬಂಗಲೆಯ ಗೃಹಪ್ರವೇಶ ನೆರವೇರಿದೆ. ಹೈದ್ರಾಬಾದ್‍ನ ಬೇಗಮ್ ಪೇಟ್‍ನಲ್ಲಿ ನಿರ್ಮಿಸಿರುವ ಮನೆಯ...
ಕೆ ಚಂದ್ರಶೇಖರ್ ಮನೆ ಗೃಹ ಪ್ರವೇಶ
ಕೆ ಚಂದ್ರಶೇಖರ್ ಮನೆ ಗೃಹ ಪ್ರವೇಶ

ಹೈದರಾಬಾದ್: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಭವ್ಯ ಬಂಗಲೆಯ ಗೃಹಪ್ರವೇಶ ನೆರವೇರಿದೆ.ಹೈದ್ರಾಬಾದ್‍ನ ಬೇಗಮ್ ಪೇಟ್‍ನಲ್ಲಿ ನಿರ್ಮಿಸಿರುವ ಮನೆಯ ಗೃಹ ಪ್ರವೇಶ ನೆರವೇರಿದೆ

ಭಾರತದ ಮುಖ್ಯಮಂತ್ರಿಗಳ ಮನೆಗಳಲ್ಲೇ ಅತಿ ವಿಶಾಲವಾದ ಹಾಗೂ ಅತಿ ವೆಚ್ಚದ ಮನೆ ಇದಾಗಿದೆ ಎಂದು ಹೇಳಲಾಗಿದೆ.

ಇಂದು ಬೆಳಗಿನ ಜಾವ 5 ಗಂಟೆ 22 ನಿಮಿಷಕ್ಕೆ  ಬ್ರಾಹ್ಮೀ ಮೂಹೂರ್ತದಲ್ಲಿ ಗೃಹ ಪ್ರವೇಶ ನೆರವೇರಿದೆ. ಚಂದ್ರ ಶೇಕರ್ ರಾವ್ ಹಾಗೂ ಪತ್ನಿ ಶೋಭಾ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು.

ಮೊದಲಿಗೆ ದೈವ ಪ್ರವೇಶ, ಯತಿ ಪ್ರವೇಶ, ಗೋ ಪ್ರವೇಶ ದ ನಂತರ ದಂಪತಿ ಗೃಹ ಪ್ರವೇಶ ನೆರವೇರಿಸಿದರು.ವಾಸ್ತು ಶಾಸ್ತ್ರದಲ್ಲಿ ಅತೀವ ನಂಬಿಕೆಯಿಟ್ಟಿರುವ ಚಂದ್ರಶೇಖರ್ ರಾವ್ ವಾಸ್ತು ಪೂಜೆ, ಸುದರ್ಶನ ಯಾಗ ಪೂರ್ಣಾಹುತಿ ನೆರವೇರಿಸಿದ್ದಾರೆ.

ಮನೆಯ ಎಲ್ಲಾ ಕಿಟಕಿಗಳು ಬುಲೆಟ್ ಪ್ರೂಫ್ ಆಗಿವೆ, 9 ಎಕರೆಯಲ್ಲಿ ನಿರ್ಮಾಣವಾಗಿರುವ ಈ ಬುಲೆಟ್ ಪ್ರೂಫ್ ಬಂಗಲೆಗೆ ಪ್ರಗತಿ ಭವನ್ ಎಂದು ಹೆಸರಿಡಲಾಗಿದೆ.ಮನೆಯಲ್ಲಿ 250 ಜನ ಕೂರಬಹುದಾದಂತಹ ಥಿಯೇಟರ್, ದೊಡ್ಡ ಕಾನ್ಫರೆನ್ಸ್ ಹಾಲ್, ಹಾಗೂ ಹಿರಿಯ ಅಧಿಕಾರಿಗಳಿಗಾಗಿ ಕೊಠಡಿಗಳಿವೆ. ಅಲ್ಲದೆ ಮನೆಯಲ್ಲಿ ಬಾತ್‍ರೂಮ್ ಸೇರಿದಂತೆ ಇಡೀ ಮನೆಗೆ ಬುಲೆಟ್ ಪ್ರೂಫ್ ಗಾಜು ಹಾಕಿಸಲಾಗಿದೆ.

ಆಂಧ್ರ ಪ್ರದೇಶ ರಾಜ್ಯಪಾಲ, ನರಸಿಂಹನ್ ಸೇರಿದಂತೆ ತೆಲಂಗಾಣ ಸಚಿವರುಸ ಶಾಸಕರು ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com