ನ.26 ರಂದು ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಪಂಡ್ಯದಲ್ಲಿ ಭಾರತ ಸೋತಿತ್ತು. ಸೋಲಿನಿಂದ ಕಂಗೆಟ್ಟಿದ್ದ ಭಾರತ ಮಲೇಷ್ಯಾ ವಿರುದ್ಧ 4-1 ಅಂತರದಿಂದ ಗೆಲುವು ಸಾಧಿಸಿದೆ. ಪಂದ್ಯದ ಕೊನೆಯ ಹಂತದ ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಭಾರತಕ್ಕೆ 58ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಪೆನಾಲ್ಟಿ ಕಾರ್ನರ್ ನ ಸದುಪಯೋಗಪಡಿಸಿಕೊಂಡ ರೂಪೇಂದರ್ ಪಾಲ್ ಸಿಂಗ್ ಗೋಲು ದಾಖಲಿಸಿ ಭಾರತ 4-1 ಅಂತದಿಂದ ಗೆಲ್ಲಲು ಸಹಕಾರಿಯಾದರು.