ಪಾಕ್ ನಿಂದ ದ್ವಿಪಕ್ಷೀಯ ಮಾತುಕತೆ ಪ್ರಸ್ತಾವನೆ ಇಲ್ಲ: ಭಾರತ
ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಡಿ.4 ರಂದು ನಡೆಯಲಿದ್ದು, ಸಮ್ಮೇಳನದಲ್ಲಿ ಭಾಗಿಯಾಗಲಿರುವ ಪಾಕ್ ಪ್ರತಿನಿಧಿಯಿಂದ ದ್ವಿಪಕ್ಷೀಯ ಮಾತುಕತೆ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟ ಪಡಿಸಿದೆ.
ಪಾಕ್ ನಿಂದ ದ್ವಿಪಕ್ಷೀಯ ಮಾತುಕತೆ ಪ್ರಸ್ತಾವನೆ ಇಲ್ಲ: ಭಾರತ
ನವದೆಹಲಿ: ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಡಿ.4 ರಂದು ನಡೆಯಲಿದ್ದು, ಸಮ್ಮೇಳನದಲ್ಲಿ ಭಾಗಿಯಾಗಲಿರುವ ಪಾಕ್ ಪ್ರತಿನಿಧಿಯಿಂದ ದ್ವಿಪಕ್ಷೀಯ ಮಾತುಕತೆ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟ ಪಡಿಸಿದೆ.
ಈ ವರೆಗೂ ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಭಾರತದ ಹೈಕಮೀಷನರ್ ಗೋಪಾಲ್ ಬಾಗ್ಲೇ ತಿಳಿಸಿದ್ದಾರೆ. ಡಿ.4 ರಂದು ಅಮೃತ್ ಸರದಲ್ಲಿ ನಡೆಯಲಿರುವ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಪಾಕ್ ಪ್ರತಿನಿಧಿ ಸರ್ತಾಜ್ ಅಜೀಜ್ ಭಾಗವಹಿಸುವಿಕೆ ಸೀಮಿತ ಅವಧಿಗೆ ನಿಗದಿಯಾಗಿದೆ.
ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲು ಡಿ.3ರಂದು ಸುಮಾರು 40 ರಾಷ್ಟ್ರಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಲಿದ್ದಾರೆ. ಸೀಮಿತ ಅವಧಿಯಲ್ಲಿ ಮಾತ್ರ ಭಾಗವಹಿಸಲಿರುವ ಪಾಕ್ ಪ್ರತಿನಿಧಿ ಸರ್ತಾಜ್ ಅಜೀಜ್, ದ್ವಿಪಕ್ಷೀಯ ಮಾತುಕತೆ ನಡೆಸುವ ಬಗ್ಗೆ ಈ ವರೆಗೂ ಸುಳಿವು ನೀಡಿಲ್ಲ.