ಕೇರಳ; ಪದ್ಮನಾಭ ಸ್ವಾಮಿ ದೇವಾಲಯಕ್ಕಿಲ್ಲ ವಸ್ತ್ರ ಸಂಹಿತೆ

ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯ ಮಾಡಲಾಗಿದೆ. ಆದರೆ ತಿರುವನಂತಪುರದಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ...
ಪದ್ಮನಾಭ ದೇವಾಲಯ
ಪದ್ಮನಾಭ ದೇವಾಲಯ

ತಿರುವನಂತಪುರ: ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯ ಮಾಡಲಾಗಿದೆ. ಆದರೆ ತಿರುವನಂತಪುರದಲ್ಲಿರುವ  ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಮಹಿಳೆ ಹಾಗೂ ಪುರುಷರ ವಸ್ತ್ರ ಸಂಹಿತೆಯ ನಿಯಮಗಳನ್ನು ಸಡಿಲಿಸಲಾಗಿದೆ.

ಮಹಿಳೆಯರು ಕಡ್ಡಾಯವಾಗಿ ಸೀರೆ ಹಾಗೂ ಪುರುಷರು ಧೋತಿ ಧರಿಸಬೇಕು ಎಂಬ ನಿಯಮವಿತ್ತು, ಆದರೆ ಈಗ ಮಹಿಳೆಯರು ಚೂಡಿದಾರ್ ಧರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ತಿರುವನಂತಪುರದ ರಿಯಾ ರಾಜಿ ಎಂಬುವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ವಸ್ತ್ರ ಸಂಹಿತೆ ನೀತಿ ಸಡಿಲಿಸಲಾಗಿದೆ ಎಂದು ದೇವಾಲಯ ಕಾರ್ಯಕಾರಿ ಅಧಿಕಾರಿ ಕೆ,ಎನ್ ಸತೀಶ್ ಹೇಳಿದ್ದಾರೆ.

ಆದರೆ ಈ ನಿರ್ಧಾರಕ್ಕೆ ದೇವಾಲಯ ಆಡಳಿತ ಮಂಡಳಿ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಆದರೆ ದೇವಾಸ್ಥಾನದ ತಂತ್ರಿಗಳು ಟ್ರಸ್ಟಿಗಳ ಜೊತೆ ಸಮಾಲೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದ ಎಂದು ಕಾರ್ಯಕಾರಿ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com