ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅನುಮೋದನೆ: ಸಿಒಪಿ21 ಗೆ ಸಹಿ ಹಾಕಿದ 62 ನೇ ರಾಷ್ಟ್ರ ಭಾರತ

ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ ಅ.2ರಂದು ಅನುಮೋದನೆ ನೀಡಿದೆ. ಒಪ್ಪಂದಕ್ಕೆ ಈ ವರೆಗೂ 61 ರಾಷ್ಟ್ರಗಳು ಅನುಮೋದನೆ ನೀಡಿದೆ.
ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅನುಮೋದನೆ
ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅನುಮೋದನೆ

ನವದೆಹಲಿ: ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ ಅ.2ರಂದು ಅನುಮೋದನೆ ನೀಡಿದೆ. ಒಪ್ಪಂದಕ್ಕೆ ಈ ವರೆಗೂ 61 ರಾಷ್ಟ್ರಗಳು ಅನುಮೋದನೆ ನೀಡಿದ್ದು, 62 ನೇ ರಾಷ್ಟ್ರವಾಗಿ ಭಾರತ ಗಾಂಧಿ ಜಯಂತಿ ದಿನದಂದು ಐತಿಹಾಸಿಕ ಒಪ್ಪಂದವನ್ನು ಅನುಮೋದಿಸಿದೆ.

ಭಾರತ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಜಾರಿಗೆ ತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಹುರುಪು ಮೂಡಿದಂತಾಗಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್‌ ಒಪ್ಪಂದ (ಸಿಒಪಿ21)ಕ್ಕೆ ಅನುಮೋದನೆ ಬಾಕಿ ಇದ್ದು, ಅದನ್ನು ಗಾಂಧಿ ಜಯಂತಿ ದಿನ ಅನುಮೋದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದಾಗ ಹೇಳಿದ್ದರು.

ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಲು, ಹವಾಮಾನ ಬದಲಾವಣೆಯಿಂದಾಗಿ ಅನಾಹುತ ಎದುರಿಸುತ್ತಿರುವ ದೇಶಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 2015 ರ ಡಿಸೆಂಬರ್‌ ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಶೃಂಗದಲ್ಲಿ, ಹವಾಮಾನ ಒಪ್ಪಂದಕ್ಕೆ 190ಕ್ಕೂ ಹೆಚ್ಚು ದೇಶಗಳು ಒಪ್ಪಿಗೆ ನೀಡಿದ್ದವು. ಒಪ್ಪಂದ ಜಾರಿಯಾಗಬೇಕಿದ್ದರೆ ಕನಿಷ್ಠ 55 ರಾಷ್ಟ್ರಗಳು ಅದಕ್ಕೆ ಅನುಮೋದನೆ ನೀಡಬೇಕಿತ್ತು. ಈಗ ಭಾರತವೂ ಸೇರಿದಂತೆ ಸಿಒಪಿ 21 ಕ್ಕೆ ಒಟ್ಟು 62 ರಾಷ್ಟ್ರಗಳು ಅನುಮೋದನೆ ನೀಡಿವೆ.

ಒಪ್ಪಂದದ ಸ್ಥಿರೀಕರಣಕ್ಕೆ ಭಾರತ ಕೈಗೊಂಡಿರುವ ನಿರ್ಧಾರ ವಿಶ್ವದಲ್ಲಿರುವ ವಿವಿಧ ದೇಶಗಳ ಒಟ್ಟು ಹೊಸಸೂಸುವಿಕೆಯ ಮಿತಿಯನ್ನು ಶೇ.51.89ರ ಸ್ಥಿರೀಕರಣಗೊಳಿಸಲು ಸಹಕಾರಿಯಾಗಿದೆ. , ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com