
ಪಣಜಿ: ಗೋವಾದ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಅವರನ್ನು ಶಿವಸೇನೆ ಮಹಾಭಾರತದ ಶ್ರೀಕೃಷ್ಣನಿಗೆ ಹೋಲಿಸಿದ್ದು, ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷವನ್ನು ಪಾಂಡವರಿಗೆ ಹೋಲಿಸಿದೆ.
ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆರ್ ಎಸ್ ಎಸ್ ನ ವೆಲಿಂಗ್ಕರ್ ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷಗಳನ್ನು ಅಧಿಕಾರದತ್ತ ಮುನ್ನಡೆಸಲಿದ್ದಾರೆ ಎಂದು ಗೋವಾ ಶಿವಸೇನೆಯ ಮುಖ್ಯಸ್ಥ ಸುದೀಪ್ ತಮನ್ಕರ್ ಹೇಳಿದ್ದಾರೆ.
ಬಿಜೆಪಿಯವರನ್ನು ಕೌರವರು ಹಾಗೂ ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷಗಳನ್ನು ಪಾಂಡವರಿಗೆ ಹೋಲಿಸಿರುವ ಶಿವಸೇನೆ ಗೋವಾ ಚುನಾವಣೆಯಲ್ಲಿ ಮಹಾಭಾರತಕ್ಕೆ ಹೋಲಿಕೆ ಮಾಡಿದ್ದು ಕೃಷ್ಣ ಪಾಂಡವರನ್ನು ಗೆಲ್ಲಿಸಿದಂತೆ, ವೆಲಿಂಗ್ಕರ್ ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್ಸೇತರ ಪಕ್ಷಗಳನ್ನು ಗೆಲ್ಲಿಸಲಿದ್ದಾರೆ ಎಂದು ಸುದೀಪ್ ತಮನ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೋವಾದಲ್ಲಿ ಬಿಜೆಪಿ ಹಾಗೂ ಬಿಜೆಪಿಯೊಂದಿಗಿನ ಪಕ್ಷಗಳು ಗೋವಾದಲ್ಲಿ ಸೋಲು ಕಾಣಲಿವೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
Advertisement