ಶಾರದ ಹಗರಣ: ಪ್ರಮುಖ ಆರೋಪಿ ಸಂಸದ ಕುನಲ್ ಘೋಷ್ ಗೆ ಮಧ್ಯಂತರ ಜಾಮೀನು

ಶಾರದ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ ಉಚ್ಚಾಟಿತ ರಾಜ್ಯಸಭಾ ಸದಸ್ಯ ಕುನಲ್ ಘೋಷ್ ಅವರಿಗೆ...
ಕುನಲ್ ಘೋಷ್
ಕುನಲ್ ಘೋಷ್
Updated on
ಕೋಲ್ಕತಾ: ಶಾರದ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ ಉಚ್ಚಾಟಿತ ರಾಜ್ಯಸಭಾ ಸದಸ್ಯ ಕುನಲ್ ಘೋಷ್ ಅವರಿಗೆ ಕೋಲ್ಕತಾ ಹೈಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಆಶಿಮ್ ಕುಮಾರ್ ರಾಯ್ ಹಾಗೂ ನ್ಯಾಯಮೂರ್ತಿ ಮಲಯ್ ಮಾರುತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಶಾರದ ಹಗರಣದ ಕಿಂಗ್ ಪಿನ್ ಕುನಲ್ ಘೋಷ್ ಗೆ ನವೆಂಬರ್ 11ರವರೆಗೆ ಮಧ್ಯಂತ ಜಾಮೀನು ನೀಡಿದ್ದಾರೆ.
ಎರಡು ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಮೇಲ್ ಜಾಮೀನು ನೀಡಿರುವ ಕೋರ್ಟ್, ನರ್ಕೆಲದಂಗ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಹೊರಗೆ ಹೋಗದಂತೆ ಮತ್ತು ವಾರಕ್ಕೆ ಒಂದು ದಿನ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸೂಚಿಸಿದೆ.
ಇದೇ ವೇಳೆ ಕುನಲ್ ಘೋಷ್ ಗೆ ಗೃಹ ಬಂಧನ ವಿಧಿಸಬೇಕು ಎಂಬ ಸಿಬಿಐ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.
ಕುನಲ್ ಘೋಷ್ ಅವರನ್ನು ನವೆಂಬರ್ 13, 2013ರಲ್ಲಿ ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com