
ನವದೆಹಲಿ: ಉಗ್ರರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸ್ಮಾರಕಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ರಾಷ್ಟ್ರೀಯ ಭದ್ರತಾ ದಳದ 90 ಕಮಾಂಡೋಗಳನ್ನು ರೆಡ್ ಫೋರ್ಟ್ ಗೆ ಮಂಗಳವಾರ ರಾತ್ರಿ ನಿಯೋಜಿಸಲಾಗಿದೆ. ಜೊತೆಗೆ ರಾಷ್ಟ್ರ ರಾಜಧಾನಿಯ ಹಲವು ಪ್ರಮುಖ ಸ್ಥಳಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದೆ.
ದೇಶದ ಇತಿಹಾಸದಲ್ಲಿ ಕೆಂಪುಕೋಟೆ ಅತಿ ಮುಖ್ಯವಾದ ಸ್ಥಳವಾಗಿದೆ, ಭಾರತ ಸ್ವತಂತ್ರ್ಯ ಪಡೆದಾಗಿನಿಂದ ಇಂದಿನವರೆಗೂ ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿಯೇ ಧ್ವಜಾರೋಹಣ ಮಾಡುತ್ತಾರೆ.ಮೊಗಲರ ಕಾಲದಲ್ಲಿ ಕಟ್ಟಿದ ಕೆಂಪುಕೋಟೆಗೆ ಸುಮಾರು 200 ವರ್ಷಗಳ ಇತಿಹಾಸವಿದೆ.
ಪ್ರಧಾನಿ ನರೇಂದ್ರ ಮೋದಿ ಬಲೋಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ವಿರೋಧಿಸಿದ ನಂತರ ಪಾಕಿಸ್ತಾನದಿಂದ ಉಗ್ರ ಚಟುವಟಿಕೆಗಳು ಹೆಚ್ಚಿವೆ. ಅದರ್ರೂ ಜಮ್ಮು ಕಾಶ್ಮೀರದಲ್ಲಿ ಪಾಕ್ ತನ್ನ ಭಯೋತ್ಪಾದಕ ಕೆಲಸವನ್ನು ಹೆಚ್ಚು ಮಾಡುತ್ತಿದೆ. ಹೀಗಾಗಿ ದೇಶದ ಪ್ರಮುಖ ಸ್ಥಳಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
Advertisement