• Tag results for ಕೆಂಪುಕೋಟೆ

ದೆಹಲಿ ಕೆಂಪುಕೋಟೆ ಹಿಂಸಾಚಾರ: ಮತ್ತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

published on : 23rd February 2021

ಕೆಂಪುಕೋಟೆಯಲ್ಲಿ ದಾಂಧಲೆ: ಪ್ರಮುಖ ಆರೋಪಿ ನಟ ದೀಪ್ ಸಿಧು 7 ದಿನ ಪೊಲೀಸ್ ವಶಕ್ಕೆ

ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದೀಪ್ ಸಿಧು ಅವರನ್ನು 10 ದಿನ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

published on : 9th February 2021

ಕೆಂಪುಕೋಟೆಯಲ್ಲಿ ಸಿಖ್ ಧ್ವಜ: ದೀಪ್ ಸಿಧು ಇತರರ ಬಂಧನಕ್ಕೆ ಬಲೆ, ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ- ದೆಹಲಿ ಪೊಲೀಸ್

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆಗೆ ನುಗ್ಗಿ ಸಿಖ್ ಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ದೀಪ್ ಸಿಧು ಸೇರಿದಂತೆ ಹಲವರ ಬಂಧನಕ್ಕೆ ಬಲೆ ಬೀಸಿರುವ ದೆಹಲಿ ಪೊಲೀಸರು 1 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದಾರೆ.

published on : 3rd February 2021

ದೆಹಲಿ ಹಿಂಸಾಚಾರದ ಹಿಂದೆ ಕೇಂದ್ರ ಸರ್ಕಾರದ ಕೈವಾಡ, ಜ.30ರಂದು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ: ರಾಜ್ಯ ರೈತರು

ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಕೃತ್ಯಕ್ಕೂ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಅವರು ಆಗ್ರಹಿಸಿದ್ದಾರೆ.

published on : 30th January 2021

ಕೆಂಪುಕೋಟೆ ಮೇಲೆ 'ಖಲಿಸ್ತಾನ್' ಬಾವುಟ ಹಾರಾಟಕ್ಕೆ ಬಹುಮಾನ! 20 ದಿನಗಳ ಹಿಂದೆಯೇ ಗೊತ್ತಿದ್ದರೂ ಭದ್ರತಾ ವೈಫಲ್ಯ!

ಕೆಂಪುಕೋಟೆಯಲ್ಲಿ ಖಲಿಸ್ತಾನಿ ಧ್ವಜ ಹಾರಾಟದ ಯೋಜನೆ ಬಗ್ಗೆ 20 ದಿನಗಳ ಹಿಂದೆಯೇ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಮನ್ವಯ ಸಮಿತಿಯಲ್ಲಿ ಚರ್ಚೆ  ನಡೆಸಲಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.

published on : 28th January 2021

ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ: ನವಜೋತ್‌ ಸಿಂಗ್‌ ಸಿಧು

ಇತಿಹಾಸದಿಂದ ಪಾಠ ಕಲಿಯಿರಿ... ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ ಎಂದು ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ.

published on : 27th January 2021

ಟ್ರಾಕ್ಟರ್ ರ್ಯಾಲಿ ಹಿಂಸಾಚಾರ: ಕಾನೂನು ಬಾಹಿರವಾಗಿ ನಡೆದುಕೊಂಡಿರುವುದು 'ಅತ್ಯಂತ ದುರದೃಷ್ಟಕರ'- ಶಶಿ ತರೂರ್

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯ ಕೆಂಪುಕೋಟೆ ಪ್ರವೇಶಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ನಾನು ಖಂಡಿಸುತ್ತೇನೆ. ಇದು ಅತ್ಯಂತ ದುರದೃಷ್ಟಕರ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದ್ದಾರೆ.

published on : 27th January 2021

ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ: 83 ಪೊಲೀಸರಿಗೆ ಗಾಯ, ನೂರಾರು ವಾಹನ ಜಖಂ, ಪ್ರಕರಣ ದಾಖಲು

ರೈತರ ಟ್ರಾಕ್ಟರ್ ರ್ಯಾಲಿ ವೇಳೆ ಉಂಟಾದ ಹಿಂಸಾಚಾರದಲ್ಲಿ 83 ಪೊಲೀಸರು ಗಾಯಗೊಂಡಿದ್ದು ಪೊಲೀಸ್ ವಾಹನಗಳೂ ಸೇರಿದಂತೆ ನೂರಾರು ವಾಹನಗಳು ಜಖಂಗೊಂಡಿವೆ ಎನ್ನಲಾಗಿದೆ.

published on : 26th January 2021

ವಿಡಿಯೋ: ಕೆಂಪು ಕೋಟೆಯಲ್ಲಿ ಹೈಡ್ರಾಮಾ, ಪೊಲೀಸರನ್ನೇ ಹೊಡೆದು ಅಟ್ಟಾಡಿಸಿದ ಪ್ರತಿಭಟನಾಕಾರರು!

ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆಯೇ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಹೊಡದು ಅಟ್ಟಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

published on : 26th January 2021

ದೆಹಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ ರೈತರು, ವಿಡಿಯೋ!

ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಧ್ವಜಸ್ತಂಭ ಮತ್ತು ಕೆಂಪುಕೋಟೆಯ ಗುಂಬಜ್ ಮೇಲೆ ಕಿಸಾನ್ ಮತ್ತು ಸಿಖ್ ಬಾವುಟವನ್ನು ಹಾರಿಸಲಾಗಿದೆ.

published on : 26th January 2021