'ಭ್ರಷ್ಟಾಚಾರ, ವಂಶ ಆಳ್ವಿಕೆ ಭಾರತದ 2 ದೊಡ್ಡ ಸವಾಲುಗಳು': ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ತಿವಿದ ಪ್ರಧಾನಿ ಮೋದಿ

ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ಕಾಂಗ್ರೆಸ್ ಗೆ ಪರೋಕ್ಷವಾಗಿ ತಿವಿದಿದ್ದು, ಭ್ರಷ್ಟಾಚಾರ, ವಂಶ ಆಳ್ವಿಕೆ ಭಾರತದ 2 ದೊಡ್ಡ ಸವಾಲುಗಳಾಗಿವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಭಾಷಣ
ಪ್ರಧಾನಿ ಮೋದಿ ಭಾಷಣ
Updated on

ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ಕಾಂಗ್ರೆಸ್ ಗೆ ಪರೋಕ್ಷವಾಗಿ ತಿವಿದಿದ್ದು, ಭ್ರಷ್ಟಾಚಾರ, ವಂಶ ಆಳ್ವಿಕೆ ಭಾರತದ 2 ದೊಡ್ಡ ಸವಾಲುಗಳಾಗಿವೆ ಎಂದು ಹೇಳಿದ್ದಾರೆ.

ಸತತ 9ನೇ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, 'ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ. ಭ್ರಷ್ಟಾಚಾರಕ್ಕೆ ಇದೂ ಒಂದುಕಾರಣವಾಗುತ್ತಿದೆ ಎಂದರು. 

'ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ. ಭ್ರಷ್ಟಾಚಾರಕ್ಕೆ ಇದೂ ಒಂದುಕಾರಣವಾಗುತ್ತಿದೆ. ಪರಿವಾರವಾದದಿಂದಲೂ ನಾವು ಬಿಡಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ರಾಜಕಾರಣದಲ್ಲಿಯೂ ಪರಿವಾರವಾದವು ಪರಿವಾರ ಭದ್ರಪಡಿಸಿಕೊಳ್ಳಲು ಯತ್ನಿಸುತ್ತದೆಯೇ ಹೊರತು ದೇಶದ ಅಭಿವೃದ್ಧಿಗೆ ಗಮನ ಕೊಡುವುದಿಲ್ಲ. ಬನ್ನಿ, ಭಾರತದ ರಾಜಕಾರಣವನ್ನು ಶುದ್ಧೀಕರಣಗೊಳಿಸಲು ನಾವು ದೇಶದ ಪರಿವಾರವಾದವನ್ನು ಕೊನೆಗಾಣಿಸೋಣ. ಇದು ಇಂದಿನ ಅನಿವಾರ್ಯತೆ ಎಂದರು.

ಭ್ರಷ್ಟಾಚಾರಕ್ಕೆ ಜಾಗೃತಿಯ ಮದ್ದು
ಅಂತೆಯೇ ಸಮಾಜದಲ್ಲಿ ಎಲ್ಲಿಯವರೆಗೆ ಭ್ರಷ್ಟಾಚಾರದ ಬಗ್ಗೆ ಅಸಹ್ಯದ ಭಾವನೆ ಬರಬೇಕು. ಸಮಾಜದಲ್ಲಿ ಭ್ರಷ್ಟಾಚಾರಿಗಳಿಗೆ ಗೌರವ ಇಲ್ಲದ ವಾತಾವರಣ ಮೂಡಬೇಕು. ಭ್ರಷ್ಟಾಚಾರದ ಬಗ್ಗೆ ಜಾಗ್ರತೆ ಬರಬೇಕು ಎಂದರು.

ನಮ್ಮ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯೂ ಇರಬೇಕು
ಸಂವಿಧಾನ ನಿರ್ಮಾರ್ತೃಗಳನ್ನು ನಾನು ಗೌರವಿಸುತ್ತೇನೆ. ಕಾಲಘಟ್ಟ ಬೇರೆ ಇದ್ದರೂ ನಮ್ಮ ಆಶಯಗಳು ಪ್ರತ್ಯೇಕ ಅಲ್ಲ. ಭಾರತದ ಅಭಿವೃದ್ಧಿ ಎನ್ನುವುದು ನಾವು ಎಲ್ಲಿಯೇ ಇದ್ದರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದ ಹಲವು ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ಬಲ ಹೆಚ್ಚಿಸಿವೆ. ನಾವು ಸಹಕಾರದ ಒಕ್ಕೂಟ ವ್ಯವಸ್ಥೆಯ ಜೊತೆಗೆ ನಮ್ಮ ರಾಜ್ಯಗಳಲ್ಲಿ ಆರೋಗ್ಯಕರ ಸ್ಪರ್ಧೆಯೂ ಇರಬೇಕು. ನಮ್ಮ ರಾಜ್ಯಗಳ ನಡುವೆ, ಸರ್ಕಾರಿ ಸೇವೆಗಳ ವಿಚಾರದಲ್ಲಿ ಸ್ಪರ್ಧೆಯ ವಾತಾವರಣ ಇರಬೇಕು ಎಂದು ನರೇಂದ್ರ ಮೋದಿ ಹೇಳಿದರು.

ಸ್ವಾವಲಂಬನೆಯ ಮಂತ್ರ ಜನಾಂದೋಲನ ಆಗಬೇಕು
ಪುಟ್ಟ ಮಕ್ಕಳಿಗೂ ನಾನು ನಮನ ಸಲ್ಲಿಸುತ್ತೇನೆ. ಮನೆಗಳಲ್ಲಿ ಐದು ವರ್ಷದ ಮಗು ವಿದೇಶಿ ಆಟಿಕೆಗಳಲ್ಲಿ ಆಡುವುದಿಲ್ಲ ಎಂದು ಸಂಕಲ್ಪ ಮಾಡಿದಾಗ ಆತ್ಮ ನಿರ್ಭರ್ ಭಾರತದ ಆಶಯ ಈಡೇರುತ್ತದೆ. ಉದ್ಯೋಗದ ಹೊಸ ಸಾಧ್ಯತೆಗಳು ಕಂಡುಬರುತ್ತಿವೆ. ಭಾರತವು ತಯಾರಿಕಾ ಕೇಂದ್ರ (ಮ್ಯಾನ್ಯುಫ್ಯಾಕ್ಚರಿಂಗ್ ಹಬ್) ಆಗುತ್ತಿದೆ. ಮೊಬೈಲ್ ಸೇರಿದಂತೆ ಹಲವು ಉಪಕರಣಗಳು ಇಲ್ಲಿಯೇ ತಯಾರಾಗುತ್ತಿವೆ. ನಾವು ವಿದ್ಯುತ್ ಕ್ಷೇತ್ರದಲ್ಲಿಯೂ ಸ್ವಾವಲಂಬಿ ಆಗಬೇಕಿದೆ ಎಂದರು.

ಸ್ವರಾಜ್ಯದಿಂದ ಸುರಾಜ್ಯ
ಇಂದು ಮಹರ್ಷಿ ಅರವಿಂದರ ಜನ್ಮದಿನವೂ ಹೌದು. ‘ಸ್ವದೇಶಿಯಿಂದ ಸ್ವರಾಜ್ಯ, ಸ್ವರಾಜ್ಯದಿಂದ ಸುರಾಜ್ಯ’ ಎನ್ನುವುದು ಅವರು ಕೊಟ್ಟ ಮಂತ್ರ. ನಾವು ಸ್ವಾವಲಂಬಿಗಳಾಗಬೇಕು. ದೇಶಕ್ಕೆ ಅನ್ನದ ಅಗತ್ಯವಿದ್ದಾಗ ನಾವು ಬೇರೆ ಕಡೆಯಿಂದ ತರಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಆತ್ಮನಿರ್ಭರ್ ಭಾರತ್ ಎನ್ನುವುದು ಎಲ್ಲ ನಾಗರಿಕರು, ಎಲ್ಲ ಸರ್ಕಾರಗಳ ಜವಾಬ್ದಾರಿ ಆಗಬೇಕು. ಆತ್ಮನಿರ್ಭರ್ ಭಾರತ್ ಸರ್ಕಾರಿ ಕಾರ್ಯಕ್ರಮ ಅಲ್ಲ. ಇದು ಸಮಾಜದ ಜನಾಂದೋಲನ. 75 ವರ್ಷಗಳ ನಂತರ ಕೆಂಪುಕೋಟೆಯಲ್ಲಿ ಭಾರತದಲ್ಲಿ ತಯಾರಾದ ತೋಪುಗಳಿಂದ ಗೌರವ ಸಲ್ಲಿಕೆಯಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com