

ಮುರಾದಾಬಾದ್: ಪರ ಪುರುಷರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಪತ್ನಿಯನ್ನು ಪ್ರಶ್ನಿಸಿದ ಗಂಡನ ನಾಲಿಗೆಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ, ಆತನ ಸ್ನೇಹಿತ ಮೂವರು ಸೇರಿ ಕತ್ತರಿಸಿ ಹಾಕಿದ್ದಾರೆ.
ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜೀತೇಂದ್ರ ಕಳೆದ 9 ತಿಂಗಳಿನಿಂದ ಪತ್ನಿ ಜತೆ ಧರ್ಮಪುರಿ ಗ್ರಾಮದಲ್ಲಿ ವಾಸವಾಗಿದ್ದ, ಕಳೆದ ಭಾನುವಾರ ಕೆಲಸಕ್ಕೆ ಹೋಗಿದ್ದ ಜೀತೇಂದ್ರ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಪರ ಪುರುಷರ ಜತೆ ರಾಸಲೀಲೆಯಲ್ಲಿ ತೊಡಗಿದ್ದಾಳೆ ಇದರಿಂದ ಕೋಪಗೊಂಡ ಜೀತೇಂದ್ರ ಆಕೆಯನ್ನು ಥಳಿಸಲು ಮುಂದಾಗಿದ್ದಾನೆ ಇದರಿಂದ ಪತ್ನಿ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನ ಜತೆ ಸೇರಿ ಗಂಡನ ನಾಲಿಗೆಯನ್ನು ಕತ್ತರಿಸಿ ಪರಾರಿಯಾಗಿದ್ದಾರೆ.
ಗಾಯಗೊಂಡ ಜೀತೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಪೊಲೀಸರಿಗೆ ದೂರು ನೀಡಿದ್ದು, ಪರಾರಿಯಾಗಿರುವ ಪತ್ನಿ ಹಾಗೂ ಪ್ರಿಯಕರನ ಬಂಧನಕ್ಕೆ ಜಾಲ ಬೀಸಿದ್ದಾರೆ.