'ಡ್ರ್ಯಾಗನ್', 'ಆನೆ' ಒಟ್ಟಿಗೆ ಹೆಜ್ಜೆ ಹಾಕುವುದು ಸಾಧ್ಯ: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚೀನಾ

ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗಿನ ಸ್ಥಿರವಾದ ಮೈತ್ರಿ, ಡ್ರ್ಯಾಗನ್ ಹಾಗೂ ಆನೆ ಕೈ ಜೋಡಿಸಿದರೆ ಶಾಂತಿಯುತವಾಗಿ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದೆ.
'ಡ್ರ್ಯಾಗನ್', 'ಆನೆ' ಒಟ್ಟಿಗೆ ಹೆಜ್ಜೆ ಹಾಕುವುದು ಸಾಧ್ಯ: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚೀನಾ
'ಡ್ರ್ಯಾಗನ್', 'ಆನೆ' ಒಟ್ಟಿಗೆ ಹೆಜ್ಜೆ ಹಾಕುವುದು ಸಾಧ್ಯ: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚೀನಾ

ನವದೆಹಲಿ: ಭಾರತ ಚೀನಾ ನಡುವೆ ಹಲವು ವಿಚಾರಗಳಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ, ಚೀನಾ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದು ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗಿನ ಸ್ಥಿರವಾದ ಮೈತ್ರಿ, ಡ್ರ್ಯಾಗನ್ ಹಾಗೂ ಆನೆ ಕೈ ಜೋಡಿಸಿದರೆ ಶಾಂತಿಯುತವಾಗಿ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದೆ.

ನಮ್ಮ ಭವಿಷ್ಯದ ದ್ವಿಪಕ್ಷೀಯ ಸಂಬಂಧವನ್ನು ಆನೆ ಮತ್ತು ಡ್ರ್ಯಾಗನ್ ನಡುವಿನ ವೈಷಮ್ಯಕ್ಕೆ ಹೋಲಿಸಲಾಗಿತ್ತು. ಆದರೆ  ದ್ವಿಪಕ್ಷೀಯ ಸಂಬಂಧದಲ್ಲಿ ಸ್ಥಿರವಾದ ಅಭಿವೃದ್ಧಿಯಿಂದ ಆನೆ ಮತ್ತು ಡ್ರ್ಯಾಗನ್ ಜೊತೆಯಲ್ಲಿ ಹೆಜ್ಜೆ ಹಾಕುವುದು ಸಾಧ್ಯ ಎಂಬುದು ದೃಢವಾಗಿದೆ ಎಂದು ಚೀನಾದ ಸರ್ಕಾರಿ ಪ್ರತಿನಿಧಿ ಹೇಳಿದ್ದಾರೆ. ಭಾರತದಲ್ಲಿ ಮಾತನಾಡಿರುವ ಚೀನಾದ ಸರ್ಕಾರಿ ಪ್ರತಿನಿಧಿ, ಭಾರತ ಹಾಗೂ ಚೀನಾ ವಿಶ್ವದ ಶಕ್ತಿಶಾಲಿ ಮಾರುಕಟ್ಟೆಗಳಾಗಿ ಹೊರಹೊಮ್ಮುತ್ತಿವೆ. ಎರಡೂ ರಾಷ್ಟ್ರಗಳ ಸಂಸ್ಕೃತಿ ಪುರಾತನ ಇತಿಹಾಸವನ್ನು ಹೊಂದಿದೆ ಎಂದು ಚೀನಾದ ಪ್ರತಿನಿಧಿ ಹೇಳಿದ್ದು ಭಾರತ ಹಾಗೂ ಚೀನಾ ಎರಡು ರಾಷ್ಟ್ರಗಳತ್ತ ವಿಶ್ವದ ಗಮನ ಕೇಂದ್ರೀಕರಿಸಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com